Publish Date: Sat, 27 Nov 2021 (12:03 IST)
Updated Date: Sat, 27 Nov 2021 (09:05 IST)
ಕೋಲ್ಕೊತ್ತಾ: ತಮಾಷೆಗಾಗಿ ವ್ಯಕ್ತಿಯೊಬ್ಬ ಸಹೋದ್ಯೋಗಿ ಮೇಲೆ ಗಾಳಿ ಹಾಕಿದ ಪರಿಣಾಮ ಆತ ಸಾವನ್ನಪ್ಪಿದ ಘಟನೆ ಪಶ್ಚಿಮ ಬಂಗಾಲದಲ್ಲಿ ನಡೆದಿದೆ.
ಇಬ್ಬರೂ ಸೆಣಬಿನ ಗಿರಣಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸದ ನಡುವೆ ತಮಾಷೆಗಾಗಿ ಸಹೋದ್ಯೋಗಿ ಸಂತ್ರಸ್ತನ ಗುಪ್ತಾಂಗಕ್ಕೆ ಪೈಪ್ ಮೂಲಕ ಗಾಳಿ ಹಾಯಿಸಿದ್ದಾನೆ.
ಪರಿಣಾಮ ಆತ ತೀವ್ರ ಅಸ್ವಸ್ಥನಾಗಿದ್ದಾನೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಾಣ ಉಳಿಸಲಾಗಲಿಲ್ಲ. ಅತಿಯಾದ ಗಾಳಿ ಹಾಯಿಸುವಿಕೆಯಿಂದ ಆತನ ಲಿವರ್ ಗೆ ತೀವ್ರ ಹಾನಿಯಾಗಿತ್ತು ಎನ್ನಲಾಗಿದೆ. ಇದೀಗಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.