Select Your Language

Notifications

webdunia
webdunia
webdunia
webdunia

ಗಂಡ ಮನೆಯಲ್ಲಿಲ್ಲದಿದ್ದಾಗ ಮಾವನೇ ಸೊಸೆಯ ಸೆರಗಿಗೆ ಕೈ ಹಾಕಿದ

ಗಂಡ ಮನೆಯಲ್ಲಿಲ್ಲದಿದ್ದಾಗ ಮಾವನೇ ಸೊಸೆಯ ಸೆರಗಿಗೆ ಕೈ ಹಾಕಿದ
ಮಧ್ಯಪ್ರದೇಶ , ಶುಕ್ರವಾರ, 26 ನವೆಂಬರ್ 2021 (10:23 IST)
ಮಧ್ಯಪ್ರದೇಶ: ಗಂಡ ಮನೆಯಲ್ಲಿಲ್ಲದ ವೇಳೆ ಮಾವನೇ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾನೆಂದು ಮಹಿಳೆಯೊಬ್ಬಳು ಪೊಲೀಸರಿಗೆ ದೂರು ನೀಡಿದ್ದಾಳೆ. ಮಧ‍್ಯಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಗಂಡ 12 ನೇ ತರಗತಿಯಲ್ಲಿ ಓದುತ್ತಿದ್ದಾನೆ. ಆತ ಶಾಲೆಗೆ ಹೋಗಿದ್ದಾಗ ಮಾವ ತನ್ನ ಮೇಲೆ ಅತ್ಯಾಚಾರ ನಡೆಸಿದ್ದು, ಈಗ ಕೊಲೆ ಬೆದರಿಕೆ ಹಾಕುತ್ತಿದ್ದಾನೆ ಎಂದು 20 ವರ್ಷದ ಯುವತಿ ದೂರು ನೀಡಿದ್ದಾಳೆ. ಪೊಲೀಸ್ ಠಾಣೆಗೆ ಗಂಡನ ಜೊತೆಗೆ ಬಂದು ದೂರು ನೀಡಿದ್ದಾಳೆ.

ಆದರೆ ಈ ಆರೋಪಗಳನ್ನು ನಿರಾಕರಿಸಿರುವ ಮಾವ ಇದೆಲ್ಲಾ ತನ್ನ ಹೆಸರಿನಲ್ಲಿರುವ ಆಸ್ತಿ ಕಬಳಿಕೆಗೆ ನಡೆಸುತ್ತಿರುವ ನಾಟಕ ಎಂದಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಉದ್ಯೋಗ ಸಿಗದೇ ಬೈಕ್ ಕಳ್ಳನಾದ ಇಂಜಿನಿಯರ್!