Select Your Language

Notifications

webdunia
webdunia
webdunia
webdunia

ಪಿಎಸ್‌ಐಯೊಂದಿಗೆ ಪತ್ನಿಯ ಅನೈತಿಕ ಸಂಬಂಧ: ರಾಸಲೀಲೆ ವಿಡಿಯೋ ಪೋಸ್ಟ್ ಮಾಡಿದ ಪತಿ

ಪಿಎಸ್‌ಐಯೊಂದಿಗೆ ಪತ್ನಿಯ ಅನೈತಿಕ ಸಂಬಂಧ: ರಾಸಲೀಲೆ ವಿಡಿಯೋ ಪೋಸ್ಟ್ ಮಾಡಿದ ಪತಿ
ವಿಜಯವಾಡಾ , ಶುಕ್ರವಾರ, 29 ಸೆಪ್ಟಂಬರ್ 2017 (19:35 IST)
ಪೊಲೀಸ್ ಅಧಿಕಾರಿಯೊಬ್ಬನೊಂದಿಗೆ ಅನೈತಿಕ ಸಂಬಂಧವಿರಿಸಿಕೊಂಡಿದ್ದ ಪತ್ನಿಯ ರಾಸಲೀಲೆ ವಿಡಿಯೋಗಳನ್ನು ಪತಿಯೇ ಸಾಮಾಜಿಕ ಅಂತರ್ಜಾಲ ತಾಣದಲ್ಲಿ ಪೋಸ್ಟ್ ಮಾಡಿದ್ದಾನೆ.
 ಕೃಷ್ಣಾ ಜಿಲ್ಲೆಯ ಹನುಮಾನ್ ಜಂಕ್ಷನ್-2 ಪೊಲೀಸ್ ಠಾಣೆಯ ಅಧಿಕಾರಿಯಾದ ವಿಜಯ್ ಕುಮಾರ್, ಮತ್ತೊಬ್ಬನ ಪತ್ನಿಯೊಂದಿಗಿರುವ ಅಶ್ಲೀಲ ಚಿತ್ರಗಳು ಯೂ-ಟ್ಯೂಬ್‌ನಲ್ಲಿ ವೈರಲ್ ಆಗಿವೆ.
 
ದಸರಾ ಹಬ್ಬದ ಬಂದೋಬಸ್ತ್‌ನಲ್ಲಿರುವ ಪೊಲೀಸ್ ಇಲಾಖೆಗೆ ತಮ್ಮದೇ ಅಧಿಕಾರಿಯ ವಿಡಿಯೋ ವೈರಲ್ ಆಗಿರುವುದು ತಲೆನೋವು ತಂದಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸರ್ವಶ್ರೇಷ್ಠ ತ್ರಿಪಾಠಿ ಪೊಲೀಸ್ ಅಧಿಕಾರಿಯನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿ ತನಿಖೆಗೆ ಆದೇಶಿಸಿದ್ದಾರೆ.       
 
ಪೊಲೀಸ್ ಸಬ್‌ಇನ್ಸೆಪೆಕ್ಟರ್ ವಿಜಯ್ ಕುಮಾರ್, ಕಳೆದ ಮೂರು ವರ್ಷಗಳಿಂದ ಬ್ಯೂಟಿಶಿಯನ್ ಆಗಿರುವ ಸಾಯಿತೇಜಾ ಪತ್ನಿಯೊಂದಿಗೆ ಅನೈತಿಕ ಸಂಬಂಧ ಮುಂದುವರಿದಿತ್ತು. ಅನೈತಿಕ ಸಂಬಂಧ ಬಿಡುವಂತೆ ಪತ್ನಿಗೆ ಮನವಿ ಮಾಡಿದರೂ ಆಕೆ ತಿರಸ್ಕರಿಸಿದ್ದಳು. ತದನಂತರ ವಿಷಯವನ್ನು ಪತ್ನಿಯ ಕುಟುಂಬದವರೊಂದಿಗೆ ತಿಳಿಸಲಾಯಿತು. ಆದಾಗ್ಯೂ ಯಾವುದೇ ಪ್ರಯೋಜನವಾಗಲಿಲ್ಲ ಎನ್ನಲಾಗಿದೆ, 
 
ಇದರಿಂದ ಆಕ್ರೋಶಗೊಂಡ ಸಾಯಿತೇಜಾ, ಪತ್ನಿ, ಪೊಲೀಸ್ ಅಧಿಕಾರಿಯೊಂದಿಗೆ ನಡೆದ ರಾಸಲೀಲೆಯ ಖಾಸಗಿ ಕ್ಷಣಗಳ ವಿಡಿಯೋ ತೆಗೆದು ಸಾಮಾಜಿಕ ಅಂತರ್ಜಾಲ ತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. ಅನೈತಿಕ ಸಂಬಂಧ ನಿಲ್ಲಿಸಲು ಯತ್ನಿಸಿದಲ್ಲಿ ಹತ್ಯೆ ಮಾಡುವುದಾಗಿ ಪೊಲೀಸ್ ಅಧಿಕಾರಿ ಬೆದರಿಕೆಯೊಡ್ಡಿದ್ದಾನೆ ಎಂದು ಸಾಯಿತೇಜಾ ತಿಳಿಸಿದ್ದಾರೆ.
 
ಸಾಮಾಜಿಕ ಅಂತರ್ಜಾಲ ತಾಣದಲ್ಲಿ ಪೊಲೀಸ್ ಅಧಿಕಾರಿಯೊಬ್ಬನ ರಾಸಲೀಲೆ ಬಹಿರಂಗವಾಗಿದ್ದರಿಂದ ಉನ್ನತ ಮಟ್ಟದ ತನಿಖೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಆದೇಶಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಕೋಡಿಮಠದ ಶ್ರೀಗಳ ಭವಿಷ್ಯ: ಭಾರತದ ಪ್ರಮುಖ ನಾಯಕನ ಹತ್ಯೆಗೆ ಸ್ಕೇಚ್