Publish Date: Fri, 29 Sep 2017 (15:27 IST)
Updated Date: Fri, 29 Sep 2017 (15:32 IST)
ಕಾಮ ಉಕ್ಕಿದಾಗ ಮಾನ ಮರ್ಯಾದೆ, ಗೌರವ ಯಾವುದೂ ಲೆಕ್ಕಕ್ಕೆ ಬರುವುದಿಲ್ಲ. ಪತ್ನಿಯೊಬ್ಬಳು ಪತಿ ಮನೆಯಲ್ಲಿ ಇಲ್ಲದಾಗ ಸೇವಕನನ್ನೇ ಕಾಮದ ಆಟಕ್ಕೆ ಆಹ್ವಾನಿಸಿದ್ದಾಳೆ
ಶ್ರೀಮಂತ ವ್ಯಕ್ತಿಯ ಪತ್ನಿಯಾದರೂ ಸೇವಕನೊಂದಿಗೆ ಕಾಮಕೂಟ ನಡೆಸಲು ಸಿದ್ದವಾಗಿದ್ದಾಳೆ. ಸೇವಕನಿಗೆ ಆಮಿಷವೊಡ್ಡಿದ್ದಾಳೆ. ಆದರೆ ಸೇವಕ ಮಾತ್ರ ನಿರಾಕರಿಸಿದ್ದಾನೆ ಎನ್ನಲಾಗಿದೆ.
ಆಗ ತಾನೇ ಮನೆಗೆ ಬಂದ ಪತಿ, ಪತ್ನಿ ತನ್ನ ಸೇವಕನೊಂದಿಗೆ ಇರುವುದು ಕಂಡ ಕೆಂಡಾಮಂಡಲವಾಗಿದ್ದಾನೆ. ಇಬ್ಬರ ನಡುವೆ ಯಾವುದೋ ಅನೈತಿಕ ಸಂಬಂಧವಿದೆ ಎಂದು ಶಂಕಿಸಿ ಸೇವಕನಿಗೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಹಲ್ಲೆಯಿಂದಾಗಿ ಗಂಭೀರವಾಗಿ ಗಾಯಗೊಂಡಿರುವ ಸೇವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಪೊಲೀಸರು ಆರೋಪಿ ಪತಿ ಮತ್ತು ಆತನ ಪತ್ನಿಯ ವಿರುದ್ಧ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.