Select Your Language

Notifications

webdunia
webdunia
webdunia
webdunia

ಪತ್ನಿಗೆ ಚಿಕಿತ್ಸೆ ಕೊಡಿಸಲಾಗದೇ ಹತ್ಯೆ ಮಾಡಿದ ಪತಿ

ಪತ್ನಿಗೆ ಚಿಕಿತ್ಸೆ ಕೊಡಿಸಲಾಗದೇ ಹತ್ಯೆ ಮಾಡಿದ ಪತಿ
ಮುಂಬೈ , ಮಂಗಳವಾರ, 16 ಮಾರ್ಚ್ 2021 (09:49 IST)
ಮುಂಬೈ: ಅನಾರೋಗ್ಯ ಪೀಡಿತ ಪತ್ನಿಗೆ ಚಿಕಿತ್ಸೆ ಕೊಡಿಸಿ ಬೇಸತ್ತು ಪತಿ ಮಹಾಶಯನೊಬ್ಬ ಆಕೆಯ ಜೀವವನ್ನೇ ತೆಗೆದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.


45 ವರ್ಷದ ಆರೋಪಿ ಪತಿ ನಿರುದ್ಯೋಗಿಯಾಗಿದ್ದ. ಮೂಲಗಳ ಪ್ರಕಾರ ಆತನ ಪತ್ನಿಗೆ ಬ್ರೈನ್ ಟ್ಯೂಮರ್ ಇತ್ತು. ಇದಕ್ಕಾಗಿ ಚಿಕಿತ್ಸೆಯನ್ನೂ ಕೊಡಿಸುತ್ತಿದ್ದ. ಆದರೆ ನಿರುದ್ಯೋಗಿಯಾಗಿದ್ದ ಆತನಿಗೆ ಹಣಕಾಸಿನ ತೊಂದರೆಯಿತ್ತು. ಹೀಗಾಗಿ ಹಣ ಖರ್ಚು ಮಾಡಲಾಗದೇ ಪತ್ನಿಯನ್ನು ಹರಿತವಾದ ಆಯುಧ ಬಳಸಿ ಹತ್ಯೆ ಮಾಡಿದ್ದಾನೆ.

ವಿಷಯ ತಿಳಿದ ನೆರೆಮನೆಯವರು ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪತಿಯನ್ನು ಬಂಧಿಸಿದ್ದಾರೆ. ವಿಚಾರಣೆ ನಡೆಸಿದಾಗ ತಾನು ಪತ್ನಿಗೆ ಚಿಕಿತ್ಸೆ ಕೊಡಿಸಿ ಬೇಸತ್ತು ಈ ಕೆಲಸ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿ ಜೊತೆ ಕಿತ್ತಾಡಿ ತನ್ನ ಕುತ್ತಿಗೆಯನ್ನೇ ಸೀಳಿಕೊಂಡ ಪತಿ