Select Your Language

Notifications

webdunia
webdunia
webdunia
Friday, 4 April 2025
webdunia

ಕೋಳಿ ಸಾರು ಮಾಡಲ್ಲ ಅಂದಿದ್ದಕ್ಕೆ ಹೆಂಡತಿ ಕೈಮುರಿದ ಪತಿ!

ಕೋಳಿ ಸಾರು
ಮುಂಬೈ , ಶನಿವಾರ, 11 ಮಾರ್ಚ್ 2023 (10:42 IST)
ಮುಂಬೈ :  ಕೋಳಿ ಸಾರು ಮಾಡಲು ನಿರಾಕರಿಸಿದ್ದಕ್ಕೆ ಕೋಪಗೊಂಡ ಪತಿ, ಪತ್ನಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಮಹಾರಾಷ್ಟ್ರದ ಚಂದ್ರಾಪುರದಲ್ಲಿ ನಡೆದಿದೆ.
 
ಪತ್ನಿ ಕೋಳಿ ಸಾರು ಮಾಡಲು ನಿರಾಕರಿಸಿದ್ದಕ್ಕೆ ಪತಿ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಆಕೆಯ ತಲೆಗೆ ಬಲವಾಗಿ ಹೊಡೆದಿದ್ದು, ಕೈ ಮೂಳೆ ಮೂಳೆ ಮುರಿಯುವಷ್ಟರ ಮಟ್ಟಿಗೆ ಹಲ್ಲೆ ನಡೆಸಿದ್ದಾನೆ. ಈ ಸಂಬಂಧ ಆರೋಪಿ ಪತಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

ಹೋಳಿ ಹಬ್ಬದ ದಿನದಂದು ಪತಿ ಮನೆಗೆ ಕೋಳಿ ತಂದು, ಹೆಂಡತಿಗೆ ರುಚಿ-ರುಚಿಯಾಗಿ ಸಾರು ಮಾಡುವಂತೆ ಹೇಳಿದ್ದಾನೆ. ಆದ್ರೆ ಪತ್ನಿ ಆಗಲೇ ಊಟ ರೆಡಿಯಾಗಿದೆ, ಈಗ ಕೋಳಿ ಬೇಯಿಸಲು ಸಾಧ್ಯವಿಲ್ಲ ಎಂದಿದ್ದಾಳೆ. ಇದರಿಂದ ಪತಿಯ ಕೋಪ ನೆತ್ತಿಗೇರಿ, ಮನೆಯ ಅಂಗಳದಲ್ಲೇ ಬಿದ್ದಿದ್ದ ದೊಣ್ಣೆ ತಂದು ಮನಬಂದಂತೆ ಥಳಿಸಿದ್ದಾನೆ. 

ಪತ್ನಿಗೆ ತಲೆಗೆ ಹಲವು ಬಾರಿ ಹೊಡೆದು ತೀವ್ರ ರಕ್ತಸ್ರಾವವಾಗುವಂತೆ ಮಾಡಿದ್ದಾನೆ. ಇದರಿಂದ ತೀವ್ರ ಪೆಟ್ಟಾಗಿದ್ದು, ಆಕೆಯ ಕೈ ಮೂಳೆ ಸಹ ಮುರಿದಿದೆ. ಆಕೆಯ ಚೀರಾಟ ಕೇಳಿ ಮನೆಗೆ ದೌಡಾಯಿಸಿದ ನೆರೆಹೊರೆಯವರು ಜಗಳ ಬಿಡಿಸಿ, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಲರ್ ಎರಚಬೇಡಿ ಎಂದಿದ್ದಕ್ಕೆ ವೃದ್ಧೆಯನ್ನೇ ಕೊಂದ್ರು!