Publish Date: Thu, 09 Mar 2023 (08:50 IST)
Updated Date: Thu, 09 Mar 2023 (09:01 IST)
ಮುಂಬೈ: ಡಬ್ಲ್ಯುಪಿಎಲ್ ಟೂರ್ನಿಯಲ್ಲಿ ಇಂದು ಪ್ರಬಲ ತಂಡಗಳಾಗಿರುವ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪರಸ್ಪರ ಸೆಣಸಾಡಲಿವೆ.
ಇದುವರೆಗೆ ನಡೆದ ಪಂದ್ಯದಲ್ಲಿ ಎರಡೂ ತಂಡಗಳೂ ಎರಡೂ ಪಂದ್ಯಗಳಲ್ಲಿ ಭರ್ಜರಿ ಗೆಲುವು ದಾಖಲಿಸಿವೆ. ಎರಡೂ ತಂಡಗಳೂ 200 ಪ್ಲಸ್ ರನ್ ಪೇರಿಸಬಲ್ಲ ಬ್ಯಾಟಿಗರನ್ನು ಹೊಂದಿದ್ದಾರೆ.
ಡೆಲ್ಲಿ ಪರ ನಾಯಕಿ ಮೆಗ್ ಲ್ಯಾನಿಂಗ್ ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ. ಅತ್ತ ಮುಂಬೈ ನಾಯಕಿ ಹರ್ಮನ್ ಮೊದಲ ಪಂದ್ಯದಲ್ಲೇ ಅಬ್ಬರಿಸಿದ್ದಾರೆ. ಹೀಗಾಗಿ ಈ ಪಂದ್ಯ ಸಮಬಲರ ಕಾಳಗವಾಗಿರುವುದರಿಂದ ರೋಚಕತೆ ನಿರೀಕ್ಷಿಸಬಹುದು. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗುವುದು.