Publish Date: Wed, 08 Mar 2023 (21:08 IST)
Updated Date: Wed, 08 Mar 2023 (21:13 IST)
ಮುಂಬೈ: ಡಬ್ಲ್ಯುಪಿಎಲ್ ನಲ್ಲಿ ಆರ್ ಸಿಬಿ ಮಹಿಳೆಯರ ಪ್ರದರ್ಶನ ಯಥಾವತ್ತು ಮುಂದುವರಿದಿದೆ. ಕಳೆದ ಎರಡು ಪಂದ್ಯ ಸೋತಿರುವ ಆರ್ ಸಿಬಿ ಇಂದಿನ ಗೆಲ್ಲಲೇಬೇಕಾದ ಪಂದ್ಯದಲ್ಲೂ ನಿರಾಶಾದಾಯಕ ಪ್ರದರ್ಶನ ಮುಂದುವರಿಸಿದೆ.
ಟಾಸ್ ಗೆದ್ದ ಗುಜರಾತ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಅದಕ್ಕೆ ತಕ್ಕ ಆಟವಾಡಿದ ಆರಂಭಿಕ ಆಟಗಾರ್ತಿ ಸೋಫಿಯಾ ಡಂಕ್ಲಿ ಕೇವಲ 28 ಎಸೆತಗಳಿಂದ 68 ರನ್ ಚಚ್ಚಿದರು. ಇವರಿಗೆ ಸರಿಸಮನಾಗಿ ಆಡಿದ ಭಾರತೀಯ ಮೂಲದ ಹರ್ಲಿನ್ ಡಿಯೋಲ್ 45 ಎಸೆತಗಳಿಮದ 67 ರನ್ ಸಿಡಿಸಿದರು. ಇವರಿಬ್ಬರ ಅಬ್ಬರದಿಂದಾಗಿ ಗುಜರಾತ್ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತು.
ಆರ್ ಸಿಬಿಗೆ ಮತ್ತೆ ಬೌಲಿಂಗ್ ನಲ್ಲಿ ಆಪತ್ ಬಾಂಧವರಾಗಿ ಬಂದ ಹೀದರ್ ನೈಟ್ 2 ವಿಕೆಟ್ ಕಬಳಿಸಿದರೆ, ಶ್ರೇಯಾಂಕ ಪಾಟೀಲ್ ಕೂಡಾ 2 ವಿಕೆಟ್ ಗಳಿಸಿದರು. ಇದೀಗ ಆರ್ ಸಿಬಿ ಗೆಲ್ಲಲು 202 ರನ್ ಗಳ ಬೃಹತ್ ಮೊತ್ತ ಗಳಿಸಬೇಕಿದೆ.