ಮುಂಬೈ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೋಳಿ ಹಬ್ಬದಂದು ಪ್ರಾಣಿಗಳ ಮೇಲೆ ಬಣ್ಣದ ನೀರೆರಚಿ ಅವುಗಳಿಗೆ ಕಿರುಕುಳ ಕೊಡಬೇಡಿ ಎಂದು ಸಲಹೆ ಕೊಟ್ಟಿದ್ದು ಈಗ ಅವರಿಗೇ ತಿರುಗುಬಾಣವಾಗಿದೆ.
ಹೋಳಿ ಹಬ್ಬದ ಶುಭಾಷಯ ಕೋರಿ ಟ್ವೀಟ್ ಮಾಡಿದ್ದ ರೋಹಿತ್ ಶರ್ಮಾ ಕೊನೆಗೆ ಹೋಳಿ ಭರ್ಜರಿಯಾಗಿ ಆಡಿ ಆದರೆ ಬೀದಿ ನಾಯಿಗಳಿಗೆ ತೊಂದರೆ ಕೊಡಬೇಡಿ ಎಂದು ಸಲಹೆ ನೀಡಿದ್ದರು. ಇದು ಕೆಲವು ವರ್ಗದ ಅಭಿಮಾನಿಗಳನ್ನು ಕೆರಳಿಸಿದೆ.
ಈ ಹಿಂದೆಯೂ ರೋಹಿತ್ ಶರ್ಮಾ ಹಿಂದೂ ಹಬ್ಬವಾದ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಹೊಡೆಯಬೇಡಿ, ಶಬ್ಧ ಮಾಲಿನ್ಯವಾಗುತ್ತದೆ, ಪ್ರಾಣಿಗಳಿಗೆ ಹಿಂಸೆಯಾಗುತ್ತದೆ ಎಂದಿದ್ದರು. ಹೋಳಿ ಹಬ್ಬದ ಸಂದರ್ಭದಲ್ಲಿಯೂ ಇದೇ ರೀತಿ ಮನವಿ ಮಾಡಿದ್ದರು.
ಆದರೆ ಹೀಗೆ ಹಿಂದೂ ಹಬ್ಬದ ಸಂದರ್ಭದಲ್ಲಿ ಮಾತ್ರವೇ ನಿಮಗೆ ಪ್ರಾಣಿ ಹಿಂಸೆ ನೆನಪಾಗುತ್ತದೆ. ಮುಸ್ಲಿಮರ ಬಕ್ರೀದ್ ವೇಳೆ ಪ್ರಾಣಿ ಹಿಂಸೆ ನೆನಪಾಗುವುದಿಲ್ಲವೇ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.