Publish Date: Wed, 08 Mar 2023 (08:20 IST)
Updated Date: Wed, 08 Mar 2023 (09:00 IST)
ಮುಂಬೈ: ಡಬ್ಲ್ಯುಪಿಎಲ್ ಕೂಟದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡ ಮತ್ತೊಂದು ಗೆಲುವು ಸಾಧಿಸಿದೆ. ಯುಪಿ ವಾರಿಯರ್ಸ್ ವಿರುದ್ಧ 42 ರನ್ ಗಳ ಗೆಲುವು ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಮತ್ತೆ 200 ಪ್ಲಸ್ ರನ್ ಗಳಿಸಿತು. ನಾಯಕಿ ಮೆಗ್ ಲ್ಯಾನಿಂಗ್ 42 ಎಸೆತಗಳಿಂದ 70 ರನ್, ಜೆಸ್ ಜೊನಾಸೆನ್ 20 ಎಸೆತಗಳಿಂದ ಅಜೇಯ 42, ಜೆಮಿಮಾ ರೊಡ್ರಿಗಸ್ ಅಜೇಯ 34 ರನ್ ಸಿಡಿಸಿದರು. ಇದರಿಂದಾಗಿ ಡೆಲ್ಲಿ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 211 ರನ್ ಗಳಿಸಿತು.
ಈ ಮೊತ್ತ ಬೆನ್ನತ್ತಿದ ಯುಪಿ ವಾರಿಯರ್ಸ್ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಲಷ್ಟೇ ಶಕ್ತವಾಯಿತು. ಯುಪಿ ವಾರಿಯರ್ಸ್ ಪರ ಬಿರುಸಿನ ಆಟವಾಡಿದ ತಹಿಲಾ ಮೆಕ್ ಗ್ರಾತ್ 50 ಎಸೆತಗಳಲ್ಲಿ ಅಜೇಯ 90 ರನ್ ಸಿಡಿಸಿದರು. ಒಂದು ವೇಳೆ ಇನ್ನೊಂದು ಓವರ್ ಇದ್ದಿದ್ದರೂ ಅವರು ಶತಕ ಪೂರೈಸುತ್ತಿದ್ದರು. ಆದರೆ ಅವರಿಗೆ ತಕ್ಕ ಸಾಥ್ ಸಿಗದೇ ಯುಪಿ ಸೋಲು ಕಾಣುವಂತಾಯಿತು. ಇದರೊಂದಿಗೆ ಡೆಲ್ಲಿ ಸತತ ಎರಡನೇ ಗೆಲುವು ಕಂಡಿತು.