Select Your Language

Notifications

webdunia
webdunia
webdunia
webdunia

2023 ರ ಐಪಿಎಲ್ ನಲ್ಲಿ ಲಕ್ನೋ ತಂಡದ ಜೆರ್ಸಿ ಹೀಗಿರಲಿದೆ

ಐಪಿಎಲ್ 2023
Photo Courtesy: Twitter
ಮುಂಬೈ: ಐಪಿಎಲ್ 2023 ಕ್ಕೆ ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ಹೊಸ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿದೆ.

ನೂತನ ವಿನ್ಯಾಸ ಮತ್ತು ಬಣ್ಣ ಹೊಂದಿರುವ ಜೆರ್ಸಿಯನ್ನು ಲಕ್ನೋ ತಂಡ ಅನಾವರಣಗೊಳಿಸಿದೆ. ಈ ವೇಳೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಲಕ್ನೋ ತಂಡದ ಮಾಲಿಕರು, ನಾಯಕ ಕೆಎಲ್ ರಾಹುಲ್, ಕೋಚ್ ಗೌತಮ್ ಗಂಭೀರ್ ಉಪಸ್ಥಿತರಿದ್ದರು.

ಕಳೆದ ಐಪಿಎಲ್ ನಲ್ಲಿ ಲಕ್ನೋ ತಂಡ ಅಸ್ಥಿತ್ವಕ್ಕೆ ಬಂದಿತ್ತು. ಕಳೆದ ಆವೃತ್ತಿಯಲ್ಲಿ ಲಕ್ನೋ ತೆಳು ನೀಲಿ, ಹಸಿರು ಮಿಶ್ರಿತ ಬಣ್ಣದ ಜೆರ್ಸಿ ಧರಿಸಿತ್ತು. ಈ ಬಾರಿ ಕಡು ನೀಲಿ ಬಣ್ಣದ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಿಂದೂ ಹಬ್ಬಕ್ಕೆ ಮಾತ್ರ ಪುಕ್ಸಟೆ ಸಲಹೆ ಕೊಡ್ತೀರಾ?! ರೋಹಿತ್ ಶರ್ಮಾಗೆ ನೆಟ್ಟಿಗರ ಟೀಕೆ