ಅಹಮ್ಮದಾಬಾದ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಇದುವರೆಗಿನ ಮೂರು ಪಂದ್ಯಗಳೂ ಮೂರು ದಿನದಲ್ಲಿ ಮುಕ್ತಾಯಗೊಂಡಿದೆ.
ಇದರಿಂದಾಗಿ ಭಾರತದ ಪಿಚ್ ಬಗ್ಗೆ ಟೀಕೆ ಕೇಳಿಬಂದಿತ್ತು. ಅದರಲ್ಲೂ ಮೂರನೇ ಟೆಸ್ಟ್ ಪಂದ್ಯ ಮೂರನೇ ದಿನದ ಬೆಳಗಿನ ಅವಧಿಯಲ್ಲೇ ಮುಕ್ತಾಯಗೊಂಡಿತ್ತು.
ಹೀಗಾಗಿ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಗೌರವ ಉಳಿಸಿಕೊಳ್ಳಲು ತಕ್ಕುದಾದ ಪಿಚ್ ರೆಡಿ ಮಾಡಲಾಗಿದೆ. ಕೆಂಪು ಮತ್ತು ಕಪ್ಪು ಮಣ್ಣು ಮಿಶ್ರಿತ ನಾರ್ಮಲ್ ಪಿಚ್ ರೆಡಿ ಮಾಡಲಾಗಿದ್ದು, ಕನಿಷ್ಠ ನಾಲ್ಕು ದಿನಗಳವರೆಗಾದರೂ ಪಂದ್ಯ ನಡೆಯುವಂತೆ ನೋಡಿಕೊಳ್ಳಲಾಗುತ್ತಿದೆ.