Select Your Language

Notifications

webdunia
webdunia
webdunia
webdunia

ಮುಂಬೈನಲ್ಲಿ ಕಬ್ಜಕ್ಕಾಗಿ ಅಬ್ಬರದ ಪ್ರಚಾರ ನಡೆಸಿದ ಉಪೇಂದ್ರ, ಕಿಚ್ಚ ಸುದೀಪ್

ಮುಂಬೈನಲ್ಲಿ ಕಬ್ಜಕ್ಕಾಗಿ ಅಬ್ಬರದ ಪ್ರಚಾರ ನಡೆಸಿದ ಉಪೇಂದ್ರ, ಕಿಚ್ಚ ಸುದೀಪ್
ಬೆಂಗಳೂರು , ಶುಕ್ರವಾರ, 10 ಮಾರ್ಚ್ 2023 (09:20 IST)
Photo Courtesy: Twitter
ಬೆಂಗಳೂರು: ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ಬಿಡುಗಡೆ ದಿನ ಹತ್ತಿರ ಬರುತ್ತಿದ್ದು, ಚಿತ್ರತಂಡ ನಿನ್ನೆ ಮುಂಬೈನಲ್ಲಿ ಭರ್ಜರಿ ಪ್ರಚಾರ ನಡೆಸಿದೆ.

ಮಾರ್ಚ್ 17 ರಂದು ಕಬ್ಜ ಸಿನಿಮಾ ಬಹುಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಪ್ರಚಾರಕ್ಕಾಗಿ ನಿನ್ನೆ ನಿರ್ದೇಶಕ ಆರ್. ಚಂದ್ರು, ನಾಯಕ ಉಪೇಂದ್ರ, ಕಿಚ್ಚ ಸುದೀಪ್, ನಾಯಕಿ ಶ್ರಿಯಾ ಸರಣ್ ಮುಂಬೈನಲ್ಲಿದ್ದರು.

ಈ ವೇಳೆ ಉಪೇಂದ್ರ, ಶ್ರಿಯಾ ಸರಣ್ ಬೈಕ್ ರೈಡ್ ನಡೆಸಿ ಪ್ರಚಾರ ಮಾಡಿದ್ದಾರೆ. ಈ ಸಿನಿಮಾ ಮತ್ತೆ ಕೆಜಿಎಫ್ ನಂತೇ ಪರಭಾಷಿಕರನ್ನೂ ಸೆಳೆಯಲಿದೆ. ಹೀಗಾಗಿ ಚಿತ್ರದ ಬಗ್ಗೆ ಭಾರೀ ನಿರೀಕ್ಷೆಯಿದೆ. ಉಪೇಂದ್ರ ನಾಯಕರಾಗಿದ್ದು, ಶ್ರಿಯಾ ಸರಣ್ ನಾಯಕಿಯಾಗಿದ್ದಾರೆ. ಕಿಚ್ಚ ಸುದೀಪ್ ಮತ್ತು ಶಿವರಾಜ್ ಕುಮಾರ್ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವೀಕೆಂಡ್ ವಿತ್ ರಮೇಶ್ ಶೋ ಆರಂಭಕ್ಕೆ ಮುಹೂರ್ತ ನಿಗದಿ