Publish Date: Thu, 09 Mar 2023 (20:56 IST)
Updated Date: Thu, 09 Mar 2023 (20:58 IST)
ಮುಂಬೈ: ಡಬ್ಲ್ಯುಪಿಎಲ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಕೇವಲ 105 ರನ್ ಗಳಿಗೆ ಆಲೌಟ್ ಆಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಿಸಿದ ಡೆಲ್ಲಿ 17.5 ಓವರ್ ಗಳಲ್ಲಿ ಸರ್ವಪತನ ಕಂಡಿತು. ಮುಂಬೈ ಬೌಲರ್ ಗಳು ಎದುರಾಳಿಗಳನ್ನು ಉಸಿರೆತ್ತದಂತೆ ನೋಡಿಕೊಂಡರು. ಆರಂಭದಿಂದಲೂ ಡೆಲ್ಲಿ ಬ್ಯಾಟಿಗರ ಮೇಲೆ ಸವಾರಿ ಮಾಡಿದ ಮುಂಬೈ ಬೌಲರ್ ಗಳು ನಿಗದಿತವಾಗಿ ವಿಕೆಟ್ ಕೀಳುತ್ತಾ ಸಾಗಿದು. ನಾಯಕಿ ಮೆಗ್ ಲ್ಯಾನಿಂಗ್ ಏಕಾಂಗಿ ಹೋರಾಟ ನಡೆಸಿ 41 ರನ್ ಗಳಿಸಿದರು. ಉಳಿದಂತೆ ಜೆಮಿಮಾ ರೊಡ್ರಿಗಸ್ 25, ರಾಧಾ ಯಾದವ್ 10 ರನ್ ಗಳಿಸಿದ್ದು ಬಿಟ್ಟರೆ ಉಳಿದವರದ್ದು ಏಕಂಕಿ ಸಾಧನೆ.
ಮುಂಬೈ ಪರ ಸಾಯಿಕಾ ಇಶಾಖೆ, ಇಸ್ಸಿ ಹೇಲಿ ಮ್ಯಾಥ್ಯೂಸ್, ರಾಂಗ್ ತಲಾ 3 ವಿಕೆಟ್ ಮತ್ತು ಪೂಜಾ ವಸ್ತ್ರಾಕರ್ 1 ವಿಕೆಟ್ ಕಬಳಿಸಿದರು.