Publish Date: Fri, 10 Mar 2023 (08:20 IST)
Updated Date: Fri, 10 Mar 2023 (08:46 IST)
ಮುಂಬೈ: ಡಬ್ಲ್ಯುಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 8 ವಿಕೆಟ್ ಗಳ ಭರ್ಜರಿ ಜಯ ಗಳಿಸಿ ಸೋಲೇ ಇಲ್ಲದ ಸರದಾರನಾಗಿ ಮುಂದುವರಿದಿದೆ.
ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 106 ರನ್ ಗಳ ಗೆಲುವಿನ ಗುರಿ ಬೆನ್ನತ್ತಿದ ಮುಂಬೈ 15 ಓವರ್ ಗಳಲ್ಲೇ 2 ವಿಕೆಟ್ ನಷ್ಟಕ್ಕೆ 109 ರನ್ ಗಳಿಸಿ ಗುರಿ ಮುಟ್ಟಿತು. ಇದರೊಂದಿಗೆ ಮುಂಬೈ ಇಂಡಿಯನ್ಸ್ ಸರ್ವಾಂಗೀಣ ಪ್ರದರ್ಶನ ಮುಂದುವರಿಸಿತು.
ಮತ್ತೆ ಮುಂಬೈ ತಂಡದ ಹೇಲಿ ಮ್ಯಾಥ್ಯೂಸ್ 32, ಯಶಿಕಾ ಭಾಟಿಯಾ 41 ರನ್ ಗಳಿಸಿ ಉತ್ತಮ ಆರಂಭ ನೀಡಿದರು. ಬಳಿಕ ಸಿವರ್ ಬ್ರಂಟ್ ಅಜೇಯ 23, ನಾಯಕಿ ಹರ್ಮನ್ ಪ್ರೀತ್ ಕೌರ್ ಅಜೇಯ 11 ರನ್ ಗಳಿಸಿ ಗೆಲುವಿನ ಔಪಚಾರಿಕತೆ ಪೂರೈಸಿದರು. ಇದರೊಂದಿಗೆ ಮುಂಬೈ ಸತತ ಮೂರನೇ ಗೆಲುವು ಕಂಡಿತು.