ನವದೆಹಲಿ: ವಕ್ಫ್ ಬಿಲ್ ಸಂವಿಧಾನ ಬಾಹಿರ ಎಂದು ಟೀಕಿಸುತ್ತಿರುವ ವಿಪಕ್ಷಗಳಿಗೆ ಗೃಹಸಚಿವ ಅಮಿತ್ ಶಾ ನಿನ್ನೆ ಸಂಸತ್ ನಲ್ಲಿ ಬೆಂಕಿ ಕಾರಿದ್ದಾರೆ. ಆ ವಿಡಿಯೋ ಇಲ್ಲಿದೆ ನೋಡಿ.
ವಕ್ಫ್ ತಿದ್ದುಪಡಿ ಬಿಲ್ ಗೆ ಇಂಡಿಯಾ ಒಕ್ಕೂಟದ ನಾಯಕರು ವಿರೋಧ ವ್ಯಕ್ತಪಡಿಸುತ್ತಲೇ ಇದ್ದಾರೆ. ಇದು ಸಂವಿಧಾನಬಾಹಿರ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಇಂಡಿಯಾ ಒಕ್ಕೂಟದ ನಾಯಕರು ಆಕ್ರೋಶ ವ್ಯಕ್ತಪಡಿಸಿವೆ.
ನಿನ್ನೆ ಮಸೂದೆ ಮಂಡನೆ ಮಾಡುವಾಗ ವಿಪಕ್ಷ ಸದಸ್ಯರು ಗದ್ದಲವೆಬ್ಬಿಸಿದ್ದಾರೆ. ಬಳಿಕ ಸ್ಪೀಕರ್ ಮತಕ್ಕೆ ಹಾಕಿದರೂ ವಿಧೇಯಕದ ವಿರುದ್ಧ ಮತ ಚಲಾಯಿಸಿದ್ದಾರೆ.
ಓರ್ವ ಮುಸ್ಲಿಂ ಸಮುದಾಯದ ಸಂಸದರಂತೂ ಇದು ಸಂವಿಧಾನ ಬಾಹಿರ. ಇದನ್ನು ದೇಶದ ಅಲ್ಪಸಂಖ್ಯಾತರು ವಿರೋಧಿಸಲಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ಇದಕ್ಕೆ ಸಿಟ್ಟಿಗೆದ್ದ ಅಮಿತ್ ಶಾ ತಕ್ಕ ಉತ್ತರ ನೀಡಿದರು.