Webdunia - Bharat's app for daily news and videos

Install App

Waqf ಕಾನೂನು ಹಿಂದೆ ಹೇಗಿತ್ತು, ಈಗ ಏನಾಗಿದೆ, ನಿಜವಾಗಿಯೂ ಇದು ಮುಸ್ಲಿಮರಿಗೆ ಮಾರಕವೇ: ಇಲ್ಲಿದೆ ಡೀಟೈಲ್ಸ್

Krishnaveni K
ಗುರುವಾರ, 3 ಏಪ್ರಿಲ್ 2025 (09:51 IST)
ನವದೆಹಲಿ: ವಕ್ಫ್ ತಿದ್ದುಪಡಿ ಬಿಲ್ ನಿನ್ನೆ ತಡರಾತ್ರಿ ಲೋಕಸಭೆಯಲ್ಲಿ ಪಾಸ್ ಆಗಿದೆ. ಈ ಹೊಸ ಕಾಯಿದೆಯಲ್ಲಿ ಏನಿದೆ, ಈ ಮೊದಲು ಹೇಗಿತ್ತು? ಈ ಹೊಸ ಕಾಯಿದೆ ನಿಜವಾಗಿಯೂ ಮುಸ್ಲಿಮರಿಗೆ ಮಾರಕವೇ ಇಲ್ಲಿದೆ ಡೀಟೈಲ್ಸ್.

ಬಹುಚರ್ಚಿತ ವಕ್ಫ್ ತಿದ್ದುಪಡಿ ಬಿಲ್ ನ್ನು ನಿನ್ನೆ ತಡರಾತ್ರಿ ಲೋಕಸಭೆಯಲ್ಲಿ ಬಹುತಮತದಿಂದ ಅಂಗೀಕಾರವಾಯಿತು. ಈ ಹೊಸ ಮಸೂದೆಯಲ್ಲಿರುವ ಕೆಲವು ಅಂಶಗಳು ಅಕ್ರಮವಾಗಿ ವಕ್ಫ್ ಆಸ್ತಿಯನ್ನು ಕಬಳಿಸುವವರಿಗೆ ನಿಜಕ್ಕೂ ಅಂಕುಶ ಹಾಕಲಿದೆ. ಆದರೆ ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರು ಇರಲಿದ್ದಾರೆ ಎನ್ನುವುದು ಮುಸ್ಲಿಮರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ, ವಕ್ಫ್ ಮಂಡಳಿಯ ಪರಮಾಧಿಕಾರಕ್ಕೂ ಕತ್ತರಿ ಬಿದ್ದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ವಕ್ಫ್ ಕಾನೂನು ಹಿಂದೆ ಹೇಗಿತ್ತು?
-ಈ ಮೊದಲು ಯಾರು ಬೇಕಾದರೂ ವಕ್ಫ್ ಗೆ ಭೂಮಿ ದಾನ ಮಾಡಬಹುದಾಗಿತ್ತು. ಮುಸ್ಲಿಮರೇ ಆಗಿರಬೇಕೆಂದಿರಲಿಲ್ಲ.
-ಆಸ್ತಿ ಕುರಿತ ಯಾವುದೇ ತಕರಾರುಗಳನ್ನು ವಕ್ಫ್ ಮಂಡಳಿಯೇ ನಿರ್ವಹಿಸುತ್ತಿತ್ತು.
-ವಕ್ಫ್ ಕುರಿತ ವ್ಯಾಜ್ಯಗಳಲ್ಲಿ ಕೋರ್ಟ್ ಮಧ್ಯಪ್ರವೇಶಿಸುವಂತಿರಲಿಲ್ಲ
-ವಕ್ಫ್ ಗೆ ಪರಮಾಧಿಕಾರ ನೀಡಲು ಸೆಕ್ಷನ್ 40 ಜಾರಿಯಲ್ಲಿತ್ತು.
-ಭೂಮಿ ಪರಿಶೀಲನೆಗೆ ಡಿಸಿಗೆ ಸಂಪೂರ್ಣ ಅಧಿಕಾರವಿತ್ತು.
-ಮಂಡಳಿಯಲ್ಲಿ ಕೇವಲ ಒಬ್ಬ ಮುಸ್ಲಿಮೇತರ ಸದಸ್ಯನಿರಬಹುದಿತ್ತು.
-ವಕ್ಫ್ ಮಂಡಳಿ ವಶಪಡಿಸಿಕೊಂಡ ಆಸ್ತಿ ಅದರದ್ದೇ ಆಗಿತ್ತು, ಯಾರೂ ಪ್ರಶ್ನೆ ಮಾಡುವಂತಿರಲಿಲ್ಲ.

ಹೊಸ ಕಾಯಿದೆಯಲ್ಲಿ ತಿದ್ದುಪಡಿ ಏನಾಗಿದೆ?
-5 ವರ್ಷ ಮುಸ್ಲಿಂ ಧರ್ಮ ಪಾಲಿಸಿದವರಿಗೆ ಮಾತ್ರ ವಕ್ಫ್ ಗೆ ದಾನ ಮಾಡಲು ಸಾಧ್ಯವಿದೆ.
-ವಕ್ಫ್ ಮಂಡಳಿಯಲ್ಲಿ ಇಬ್ಬರು ಮುಸ್ಲಿಮೇತರ ಸದಸ್ಯರು ಇರಲಿದ್ದಾರೆ.
-ಸೆಕ್ಷನ್ 40 ರದ್ದಾಗಲಿದ್ದು, ಮಾಲಿಕತ್ವವನ್ನು ಕೋರ್ಟ್ ನಲ್ಲಿ ಪ್ರಶ್ನಿಸಲು ಅವಕಾಶವಿರಲಿದೆ.
-ಜಿಲ್ಲಾಧಿಕಾರಿ ಬದಲು ರಾಜ್ಯಕ್ಕೆ ಪ್ರತ್ಯೇಕ ಅಧಿಕಾರ ನೇಮಕವಾಗಲಿದೆ.
-ರಾಜ್ಯಗಳು ವಕ್ಫ್ ಮಂಡಳಿಯಲ್ಲಿ ಇಬ್ಬರು ಮುಸ್ಲಿಮೇತರ ಸದಸ್ಯರನ್ನು ನೇಮಿಸಬಹುದು.
-ಗೊಂದಲಗಳಿದ್ದಲ್ಲಿ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments