Publish Date: Wed, 20 Dec 2023 (18:01 IST)
Updated Date: Wed, 20 Dec 2023 (18:05 IST)
ಚೀನಾದ ವಾಯವ್ಯ ಭಾಗದ ಗಾನ್ಸು ಹಾಗೂ ಕಿಂಗಾಯ್ ಪ್ರಾಂತ್ಯದಲ್ಲಿ 6.2 ರಿಕ್ಟರ್ ಮಾಪಕದ ಭಾರೀ ಭೂಕಂಪ ಸಂಭವಿಸಿದ್ದು, 118 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ 700ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.ಈ ಕುರಿತು ಮಾಹಿತಿ ನೀಡಿದ ವಕ್ತಾರರಾದ ಹ್ಯಾನ್ ಶುಜುನ್, ಲೈಗೂ ನಗರವನ್ನು ಕೇಂದ್ರೀಕೃತವಾಗಿಸಿಕೊಂಡು 10 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದಿದ್ದಾರೆ.