Publish Date: Mon, 18 Dec 2023 (11:30 IST)
Updated Date: Mon, 18 Dec 2023 (11:31 IST)
ಬೆಂಗಳೂರು: ಹಿರಿಯ ನಟಿ ಲೀಲಾವತಿ ನಮ್ಮನ್ನಗಲಿ ಇಂದಿಗೆ 10 ದಿನ ಕಳೆದಿದ್ದು, ಇಂದು 11 ನೆಯ ದಿನ ಕಾರ್ಯ ನಡೆಯಲಿದೆ.
ಡಿಸೆಂಬರ್ 8 ರಂದು ವಯೋಸಹಜ ಖಾಯಿಲೆಗಳಿಂದಾಗಿ ಇಹಲೋಕ ತ್ಯಜಿಸಿದ್ದರು. ನೆಲಮಂಗಲದ ಅವರ ತೋಟದ ಮನೆಯಲ್ಲಿಯೇ ಸಕಲ ಸರ್ಕಾರೀ ಗೌರವಗಳೊಂದಿಗೆ ನಟಿಗೆ ಅಂತಿಮ ಸಂಸ್ಕಾರ ಮಾಡಲಾಗಿತ್ತು.
ಇಂದು ಮಧ‍್ಯಾಹ್ನ 12.30 ರ ನಂತರ ಲೀಲಾವತಿ ಅವರ ವೈಕುಂಠ ಸಮಾರಾಧನೆ ಕಾರ್ಯಕ್ರಮಗಳು ನಡೆಯಲಿವೆ. ಲೀಲಾವತಿ ಕುಟುಂಬಸ್ಥರು, ಆಪ್ತರು ಇಂದಿನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ವೈಕುಂಠ ಸಮಾರಾಧನೆ ನಿಮಿತ್ತ ಲೀಲಾವತಿ ಸಮಾಧಿಗೆ ಹೂವಿನ ಅಲಂಕಾರ ಮಾಡಲಾಗಿದೆ. ಪುತ್ರ ವಿನೋದ್ ರಾಜ್ ಪೂಜಾ ವಿಧಿ ವಿಧಾನಗಳನ್ನು ಮಾಡಲಿದ್ದಾರೆ. ಜೊತೆಗೆ ಕೆಲವು ಸೆಲೆಬ್ರಿಟಿಗಳು, ಆಪ್ತರೂ ಇಂದು ಲೀಲಾವತಿ ನಿವಾಸಕ್ಕೆ ಭೇಟಿ ನೀಡುವ ಸಾಧ‍್ಯತೆಯಿದೆ.