Select Your Language

Notifications

webdunia
webdunia
webdunia
webdunia

ಕಾಜೋಲ್ ಯಶಸ್ವಿ ನಟಿಯಾಗಿದ್ದು ಹೇಗೆ ಗೊತ್ತಾ?

Kajol
mumbai , ಸೋಮವಾರ, 18 ಡಿಸೆಂಬರ್ 2023 (10:44 IST)
ಬಾಲಿವುಡ್‌ನಲ್ಲಿ ಶಿಸ್ತಿಗೆ ತುಂಬಾ ಆದ್ಯತೆಯಿದೆ. ಕ್ಷುಲ್ಲಕ ಕಾರಣಗಳಿಗಾಗಿ ಕೆಲ ಯಶಸ್ವಿ ನಟಿಯರು ಶೂಟಿಂಗ್ ಕ್ಯಾನ್ಸಲ್ ಮಾಡುವುದುಂಟು. ಆದರೆ,  ಇಲ್ಲೊಬ್ಬ ನಟಿಯಿದ್ದಾಳೆ ಕಾಜೋಲ್.. ಅವರ ಶಿಸ್ತುಬದ್ಧ ಜೀವನಕ್ಕೆ ಬಾಲಿವುಡ್ ನಿರ್ಮಾಪಕರು, ನಿರ್ದೇಶಕರು ಸೈ ಎಂದಿದ್ದಾರಂತೆ.
 
  ಜ್ವರವಿದ್ದಾಗಲೂ ಕಾಜೋಲ್ ಶೂಟಿಂಗ್ ಗೆ ತಕ್ಕ ಸಮಯಕ್ಕೆ ಹಾಜರಾಗಿದ್ದರಂತೆ. ಅದೇ ಶಿಸ್ತಿನ ಕಾರಣಕ್ಕೆ ಕಾಜೋಲ್ ಎಂದರೆ ಈಗಲೂ ಜನ ಇಷ್ಟಪಡುತ್ತಾರೆ. ಆಕೆಯ ಕುಚ್ ಕುಚ್ ಹೋತಾ ಹೈ, ದಿಲ್ ವಾಲೇ ದುಲ್ಹನಿಯಾ ಲೇ ಜಾಯೇಂಗೇ, ಗುಪ್ತ್, ದುಷ್ಮನ್ ಮುಂತಾದ ಚಿತ್ರಗಳನ್ನು ಜನ ಮರೆಯಲು ಸಾಧ್ಯವೇ? ಇಂತಹ ಅಪ್ರತಿಮ ಕಲಾವಿದೆಗೆ ಒಂದು ಸೆಲ್ಯೂಟ್.
 
ಬಾಲಿವುಡ್ ನ ಎವರ್ ಗ್ರೀನ್ ಹೀರೋಯಿನ್ ಕಾಜೋಲ್ ಬಾಲಿವುಡ್ ಗೆ ಕಾಲಿಟ್ಟು 30 ವರ್ಷಗಳು ತುಂಬಿವೆ. ಈ ಸುದೀರ್ಘ ವೃತ್ತಿ ಜೀವನದಲ್ಲಿ ಕಾಜೋಲ್ ಒಮ್ಮೆ ಮಾತ್ರ ಶೂಟಿಂಗ್ ಕ್ಯಾನ್ಸಲ್ ಮಾಡಿಕೊಂಡಿದ್ದರಂತೆ.
 
ಅದು ಪುತ್ರಿ ನ್ಯಾಸಾಗೆ ಜ್ವರ ಬಂದಿದ್ದು.  104 ಡಿಗ್ರಿ ಜ್ವರದಿಂದ ಬಳಲುತ್ತಿದ್ದಳು. ಆವತ್ತು ಮಾತ್ರ ನಿರ್ಮಾಪಕರಿಗೆ ಫೋನ್ ಮಾಡಿ ಈವತ್ತು ಶೂಟಿಂಗ್ ಗೆ ಬರಕ್ಕಾಗಲ್ಲ ಎಂದಿದ್ದೆ. ಆವತ್ತು ಒಂದೇ ದಿನ ನನ್ನಿಂದಾಗಿ ನಿರ್ಮಾಪಕರಿಗೆ ತೊಂದರೆಯಾಗಿದ್ದು’ ಎಂದು ಕಾಜೋಲ್ ಸ್ಮರಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಫ್ಯಾಮಿಲಿ ಜೊತೆ ಟೂರ್ ಹೊರಟ ಸೈಫ್ ಅಲಿ ಖಾನ್ ಏರ್ ಪೋರ್ಟ್ ನಲ್ಲೇ ಸ್ಟಾಫ್ ಜೊತೆಗೆ ಕಿತ್ತಾಟ