Select Your Language

Notifications

webdunia
webdunia
webdunia
webdunia

ಹಾಟ್‌ಫೋಟೋ ಶೂಟ್‌ಗಾಗಿ ಮಾಲ್ದೀವ್ಸ್‌ಗೆ ತೆರಳಿದ ಕತ್ರಿನಾ ಕೈಫ್

Katrina Kaif
mumbai , ಶನಿವಾರ, 16 ಡಿಸೆಂಬರ್ 2023 (11:33 IST)
ಇಷ್ಟಕ್ಕೂ ಕತ್ರಿನಾ ಮಾಲ್ಡೀವ್‌ಗೆ ಹೋಗಿರೋ ಉದ್ದೇಶ ಫೋಟೋಶೂಟ್‌ಗಾಗಿ. ಖ್ಯಾತ ಡಿಸೈನರ್ ಮನೀಶ್ ಮಲ್ಹೋತ್ರಾ ಕೂಡ ಮಾಲ್ಡೀವ್‌ನಲ್ಲಿದ್ದಾರೆ. ಮನೀಶ್ ಒಡಲಲ್ಲಿ ಕೂತು ಕತ್ರಿನಾ ಫೋಟೋ ತೆಗೆಸಿಕೊಂಡಿದ್ದಾರೆ. 
 
ಇವರಿಬ್ಬರ ನಡುವೆ ಇರುವ ಅನ್ಯೋನ್ಯತೆಗೆ ಇದು ಉದಾಹರಣೆ. ಈ ಫೋಟೋ ನೋಡಿದವರು ಇಬ್ಬರ ನಡುವೆ ಏನೋ ನಡೀತಿದೆ ಎಂದು ಕಥೆ ಕಟ್ಟುತ್ತಿದ್ದಾರೆ. ಆದರೆ ಈ ಬಗ್ಗೆ ಕತ್ರಿನಾ ಮಾತ್ರ ಕ್ಯಾರೆ ಅಂತಿಲ್ಲ. ಬದಲಾಗಿ ಬೀಚ್‌ ನಲ್ಲಿ ಎಂಜಾಯ್ ಮಾಡುತ್ತಿರುವ ಬಿಕಿನಿ ಫೋಟೋಗಳನ್ನು ರಿಲೀಸ್ ಮಾಡಿ ಅಭಿಮಾನಿಗಳ ಕಣ್ಣು ತಂಪು ಮಾಡಿದ್ದಾರೆ. 
 
ಬಾಲಿವುಡ್ ಸಿನಿಮಾಗಳಲ್ಲಿ ಕತ್ರಿನಾ ಕೈಫ್ ಹೆಚ್ಚಾಗಿ ಈಗ ಕಾಣಿಸುತ್ತಿಲ್ಲ. ಟೈಗರ್ ಜಿಂದಾ ಹೈ ಚಿತ್ರದ ನಂತರ ಎಲ್ಲಿಗೆ ಹೋದರು ಅಂತ ಅಭಿಮಾನಿಗಳು ಹುಡುಕಾಡುವಂತಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಕತ್ರಿನಾರನ್ನು ಮರತೇ ಹೋಗಿದ್ದಾರೆ. ಇದೀಗ ಮಾಲ್ಡೀವ್ ಸಮುದ್ರ ತೀರದಲ್ಲಿ ಕಾಣಿಸಿಕೊಂಡು ಎಲ್ಲರ ಗಮನಸೆಳೆದಿದ್ದಾರೆ.
 
"ಪ್ರಪಂಚದಲ್ಲಿ ನಾನಾ ತರದ ಜನ ಇರ್ತಾರೆ. ಒಬ್ಬೊಬ್ಬರದು ಒಂದೊಂದು ತರ ಮನಸ್ಥಿತಿ. ಒಬ್ಬೊಬ್ಬರು ಒಂದೊಂದು ಇಷ್ಟ ಪಡ್ತಾರ್ರೆ. ಕೆಲವರಿಗೆ ಸಿನಿಮಾ ಅಂದ್ರೆ ಇಷ್ಟ. ಇನ್ನೂ ಕೆಲವರಿಗೆ ಕ್ರೀಡೆಗಳೆಂದರೆ ಇಷ್ಟ. ಇನ್ನೂ ಕೆಲವರು ವಿದೇಶಗಳನ್ನು ಸುತ್ತಾ ಎಂಜಾಯ್ ಮಾಡ್ತಾರೆ. ಸಮಯ ಸಿಕ್ಕಾಗ ಕುಟುಂಬದೊಂದಿಗೆ ಕಳೆಯುವವರು ಕೆಲವರು. ನನಗೆ ಮಾತ್ರ ಬೀಚ್ ಅಂದ್ರೆ ಇಷ್ಟ. ಅಲ್ಲಿ ಮತ್ಸ್ಯಕನ್ಯೆ ತರಹ ಈಜಾಡುವುದೆಂದರೆ ಇನ್ನೂ ಇಷ್ಟ " ಅಂತಿದ್ದಾರೆ ಕತ್ರಿನಾ.

Share this Story:

Follow Webdunia kannada

ಮುಂದಿನ ಸುದ್ದಿ

ಹಾಟ್, ಬೋಲ್ಡ್ ಪಾತ್ರಗಳಿಗೂ ಸೈ ಎಂದ ಪೂಜಾ ಹೆಗ್ಡೆ