Select Your Language

Notifications

webdunia
webdunia
webdunia
webdunia

ಲೀಲಾವತಿ ಸಮಾಧಿಗೆ ಹಾಲು,ತುಪ್ಪ ಬಿಡುವ ಕಾರ್ಯಕ್ರಮ ಇಂದು

ಲೀಲಾವತಿ ಸಮಾಧಿಗೆ ಹಾಲು,ತುಪ್ಪ ಬಿಡುವ ಕಾರ್ಯಕ್ರಮ ಇಂದು
ಬೆಂಗಳೂರು , ಭಾನುವಾರ, 10 ಡಿಸೆಂಬರ್ 2023 (10:21 IST)
ಬೆಂಗಳೂರು: ಮೊನ್ನೆಯಷ್ಟೇ ನಿಧನರಾಗಿದ್ದ ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿಯವರನ್ನು ನಿನ್ನೆ ಸಕಲ ವಿಧಿ ವಿಧಾನಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗಿತ್ತು.

ನೆಲಮಂಗಲ ಬಳಿಯ ಲೀಲಾವತಿ ಫಾರ್ಮ್ ಹೌಸ್ ನಲ್ಲಿ ಅಂತ್ಯಕ್ರಿಯೆ ನಡೆದಿತ್ತು. ಇಂದು ಲೀಲಾವತಿಯ ಸಮಾಧಿಗೆ ಹಾಲು, ತುಪ್ಪು ಬಿಡುವ ಕಾರ್ಯ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಮಾತ್ರ ಪಾಲ್ಗೊಳ್ಳಲಿದ್ದಾರೆ.

ಮಧ್ಯಾಹ್ನ 12 ಗಂಟೆಗೆ ಹಾಲು, ತುಪ್ಪ ಬಿಡುವ ಕಾರ್ಯಕ್ರಮ ನಡೆಯಲಿದೆ. ಬಳಿಕ ಅಭಿಮಾನಿಗಳಿಗೂ ಸಮಾಧಿ ದರ್ಶನ ಮಾಡಲು ಅವಕಾಶವಿರಲಿದೆ. ಉಳಿದ ಕಾರ್ಯಗಳನ್ನು 11 ನೇ ದಿನದ ಬಳಿಕ ಮಾಡಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ.

86 ವರ್ಷದ ಲೀಲಾವತಿಯವರು ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದರು. ಮೊನ್ನೆ ಅಪರಾಹ್ನ ಇಹಲೋಕ ತ್ಯಜಿಸಿದ್ದರು. ನಿನ್ನೆ ಸಾರ್ವಜನಿಕ ದರ್ಶನದ ನಂತರ ಅಪರಾಹ್ನ ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ಅವರ ಅಂತ್ಯಕ್ರಿಯೆ ನಡೆಸಲಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಬಚ್ಚನ್ ಕುಡಿ ಅಗಸ್ತ್ಯಾ ನಂದ ಸಿನಿಮಾ ಚೆನ್ನಾಗಿಲ್ಲ ಎಂದ ಪೋಸ್ಟ್ ಗೆ ಲೈಕ್ ಕೊಟ್ಟ ರವೀನಾ ಟಂಡನ್