ಬೆಂಗಳೂರು: ವಯೋಸಹಜ ಖಾಯಿಲೆಯಿಂದಾಗಿ ಹಾಸಿಗೆ ಹಿಡಿದಿರುವ ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿಯವರನ್ನು ಇಂದು ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ್ದಾರೆ.
ಲೀಲಾವತಿ ನಿವಾಸಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರ ಆರೋಗ್ಯ ವಿಚಾರಿಸಿದ್ದಾರೆ. ಈ ವೇಳೆ ಪುತ್ರ ವಿನೋದ್ ರಾಜ್ ಸಿಎಂಗೆ ತಾಯಿಯ ಆರೋಗ್ಯದ ಬಗ್ಗೆ ವಿಚಾರಿಸಿಕೊಂಡರು.
ಇತ್ತೀಚೆಗಷ್ಟೇ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡಾ ಲೀಲಾವತಿಯವರ ನಿವಾಸಕ್ಕೆ ಭೇಟಿ ಕೊಟ್ಟಿದ್ದರು. ಅಲ್ಲದೆ, ಸ್ಯಾಂಡಲ್ ವುಡ್ ಕಲಾವಿದರಾದ ದರ್ಶನ್, ಅರ್ಜುನ್ ಸರ್ಜಾ, ಉಮಾಶ್ರೀ ಸೇರಿದಂತೆ ಅನೇಕ ಕಲಾವಿದರು ಅಮ್ಮನ ಆರೋಗ್ಯ ವಿಚಾರಿಸಿದ್ದಾರೆ.
ಲೀಲಾವತಿ ತೀವ್ರ ಅನಾರೋಗ್ಯಕ್ಕೀಡಾಗಿದ್ದು, ಮಾತನಾಡುವ ಸ್ಥಿತಿಯಲ್ಲೂ ಇಲ್ಲ. ತಾಯಿಯ ಆರೋಗ್ಯದ ಬಗ್ಗೆ ನೆನೆದು ಪುತ್ರ ವಿನೋದ್ ರಾಜ್ ಕಣ್ಣೀರು ಹಾಕುತ್ತಿದ್ದಾರೆ. ಲೀಲಾವತಿಯವರಿಗೆ ಸರ್ಕಾರದಿಂದ ಏನು ಸಹಾಯ ಮಾಡಬಹುದೋ ಮಾಡಲು ಸಿದ್ಧ ಎಂದು ಎಂದಿದ್ದಾರೆ.