ಬೆಂಗಳೂರು: ಹಿರಿಯ ನಟಿ ಲೀಲಾವತಿ ತಮ್ಮ ಹುಟ್ಟುಹಬ್ಬವನ್ನು ಅವರ ಪುತ್ರ ವಿನೋದ್ ರಾಜ್ ವಿಶೇಷವಾಗಿ ಆಚರಿಸಿಕೊಂಡಿದ್ದಾರೆ.
ಇತ್ತೀಚೆಗೆ ಅವರ ಹುಟ್ಟುಹಬ್ಬದ ನೆಪದಲ್ಲಿ ಸಿನಿಮಾ ರಂಗದ ಆಪ್ತರನ್ನೆಲ್ಲಾ ಕರೆದು ಲೀಲಾವತಿ, ಪುತ್ರ ವಿನೋದ್ ರಾಜ್ ಭರ್ಜರಿ ಔತಣ ಕೂಟ ನೀಡಿದ್ದಾರೆ.
ಈ ಔತಣ ಕೂಟದಲ್ಲಿ ಹಿರಿಯ ನಟ ದೊಡ್ಡಣ‍್ಣ, ಸುಂದರ್ ರಾಜ್, ಜೈಜಗದೀಶ್, ಶ್ರೀಧರ್, ಭವ್ಯಾ, ಪದ್ಮಾ ವಾಸಂತಿ, ಪೂಜಾ ಗಾಂಧಿ ಸೇರಿದಂತೆ ಒಂದು ತಲೆಮಾರಿನ ಹಿರಿಯ ನಟರೆಲ್ಲಾ ಆಗಮಿಸಿ ಲೀಲಾವತಿ ಆಶೀರ್ವಾದ ಪಡೆದಿದ್ದಾರೆ. ವಯೋಸಹಜವಾಗಿ ಲೀಲಾವತಿ ಇತ್ತೀಚೆಗೆ ಎದ್ದು ಹೆಚ್ಚು ಓಡಾಡುವ ಸ್ಥಿತಿಯಲ್ಲಿಲ್ಲ. ಹಾಗಿದ್ದರೂ ತಮ್ಮನ್ನು ನೋಡಲು ಬಂದ ಸಿನಿ ಸ್ನೇಹಿತರನ್ನು ಪ್ರೀತಿಯಿಂದಲೇ ಮಾತನಾಡಿಸಿದ್ದಾರೆ.