Select Your Language

Notifications

webdunia
webdunia
webdunia
webdunia

ಫಿಲಂ ಸಿಟಿಗೆ ಬೇಡಿಕೆಯಿಟ್ಟ ರಿಷಬ್ ಶೆಟ್ಟಿ

ಫಿಲಂ ಸಿಟಿಗೆ ಬೇಡಿಕೆಯಿಟ್ಟ ರಿಷಬ್ ಶೆಟ್ಟಿ
ಬೆಂಗಳೂರು , ಸೋಮವಾರ, 29 ಮೇ 2023 (16:03 IST)
ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ತಮ್ಮದೇ ಸ್ವಂತ ಫಿಲಂ ಸಿಟಿ ಬೇಕೆನ್ನುವುದು ಕಲಾವಿದರು, ತಂತ್ರಜ್ಞರ ಬಹುದಿನಗಳ ಬೇಡಿಕೆ. ಇದನ್ನು ಈ ಮೊದಲು ರಾಕಿಂಗ್ ಸ್ಟಾರ್ ಯಶ್ ಕೂಡಾ ಹೇಳಿದ್ದರು.

ಇದೀಗ ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಕೂಡಾ ಫಿಲಂ ಸಿಟಿ ಅಗತ್ಯದ ಬಗ್ಗೆ ಮಾತನಾಡಿದ್ದಾರೆ. ಕನ್ನಡ ಚಿತ್ರರಂಗದ ಅನುಕೂಲಕ್ಕಾಗಿ ಬೆಂಗಳೂರಿನಲ್ಲೇ ಫಿಲಂ ಸಿಟಿ ನಿರ್ಮಾಣ ಮಾಡಿ ಎಂದು ರಿಷಬ್ ಸರ್ಕಾರಕ್ಕೆ ಬೇಡಿಕೆಯಿಟ್ಟಿದ್ದಾರೆ.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಆಯೋಜಿಸಿದ್ದ ಯುವ ಶಕ್ತಿ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು ಫಿಲಂ ಸಿಟಿ ನಿರ್ಮಾಣ ಮತ್ತು ಅದರ ಅಗತ್ಯದ ಬಗ್ಗೆ ಮಾತನಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಂಬರೀಶ್ ರೊಮ್ಯಾಂಟಿಕ್ ಹಾಡುಗಳಿಗೆ ಅಭಿ-ಅವಿವಾ ಡ್ಯಾನ್ಸ್