ಬೆಂಗಳೂರು: ಇಂದು ರೆಬಲ್ ಸ್ಟಾರ್ ಅಂಬರೀಶ್ ಅವರ ಜನ್ಮಜಯಂತಿಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸುಮಲತಾ ಅಂಬರೀಶ್, ಸಿನಿ ರಂಗದ ಕಲಾವಿದರು, ಅಭಿಮಾನಿಗಳು ಶುಭ ಕೋರುತ್ತಿದ್ದಾರೆ.
ಈ ನಡುವೆ ಸುಮಲತಾ ತಮ್ಮ ಪ್ರೀತಿಯ ಪತಿ ಅಂಬರೀಶ್ ಮತ್ತು ಪುತ್ರ ಅಭಿಷೇಕ್ ಮಗುವಾಗಿದ್ದಾಗ ತೆಗೆದಿದ್ದ ಸುಂದರ ಫೋಟೋಗಳ ಗ್ಯಾಲರಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿ ಶುಭ ಕೋರಿದ್ದಾರೆ.
ಅಂಬರೀಶ್ ಇಂದು ಬದುಕಿದ್ದರೆ 71 ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಸಿನಿಮಾ ಹೊರತಾಗಿಯೂ ಅವರು ಅಭಿಮಾನಿಗಳ ಹೃದಯಕ್ಕೆ ಹತ್ತಿರವಾಗಿದ್ದವರು. ಅವರನ್ನು ಇಂದು ಅಭಿಮಾನಿಗಳು ಸ್ಮರಿಸಿಕೊಳ್ಳುತ್ತಿದ್ದಾರೆ.