Publish Date: Mon, 29 May 2023 (08:40 IST)
Updated Date: Mon, 29 May 2023 (08:51 IST)
ಹೈದರಾಬಾದ್: ನರೇಶ್-ಪವಿತ್ರಾ ಲೋಕೇಶ್ ಅಭಿನಯದ ಮತ್ತೆ ಮದುವೆ ಸಿನಿಮಾಗೆ ಪವಿತ್ರಾ ಪಡೆದ ಸಂಭಾವನೆ ಈಗ ಎಲ್ಲರ ಹುಬ್ಬೇರುವಂತೆ ಮಾಡಿದೆ.
ನರೇಶ್ ನಿರ್ಮಿಸಿ ನಟಿಸಿದ್ದ ಸಿನಿಮಾದಲ್ಲಿ ನಟಿಸಲು ಪವಿತ್ರಾ ಬರೋಬ್ಬರಿ 10 ಕೋಟಿ ರೂ. ಸಂಭಾವನೆ ಪಡೆದಿದ್ದಾರಂತೆ. ಇದು ಸದ್ಯಕ್ಕೆ ತೆಲುಗಿನ ಟಾಪ್ ಹೀರೋಯಿನ್ ರಶ್ಮಿಕಾ, ಸಮಂತಾ ಮುಂತಾದವರಿಗಿಂತಲೂ ಅಧಿಕ.
ನರೇಶ್ ಹಾಗೂ ಪವಿತ್ರಾ ನಿಜ ಜೀವನದಲ್ಲೂ ಜೋಡಿಯಾಗಿದ್ದು, ಇವರಿಬ್ಬರ ನಿಜ ಜೀವನದ ಕತೆಯನ್ನೇ ಆಧಾರವಾಗಿಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಕೂಡಾ ಸಿಕ್ಕಿದೆ.