ಹೈದರಾಬಾದ್: ತಮ್ಮ ವೈಯಕ್ತಿಕ ಜೀವನದ ತುಣುಕುಗಳನ್ನೇ ಇಟ್ಟುಕೊಂಡು ತೆಲುಗು ನಟ ನರೇಶ್ ಮತ್ತೆ ಮದುವೆ ಎಂಬ ಸಿನಿಮಾ ನಿರ್ಮಿಸಿ, ನಟಿಸಿದ್ದಾರೆ.
ತಮ್ಮ ಹಾಗೂ ಪವಿತ್ರಾ ಲೋಕೇಶ್ ನಡುವಿನ ಪ್ರೇಮ ಸಂಬಂಧವನ್ನೇ ಕತೆಯಾಗಿಸಿ ಸಿನಿಮಾ ಮಾಡಲಾಗಿದೆ. ಈ ಸಿನಿಮಾ ಬಹುಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಸಿನಿಮಾದಲ್ಲಿ ಪವಿತ್ರಾ-ನರೇಶ್ ಜೋಡಿ ಬೋಲ್ಡ್ ದೃಶ್ಯಗಳಲ್ಲಿ ಅಭಿನಯಿಸಿದ್ದಾರಂತೆ.
ಮತ್ತೆ ಮದುವೆ ಸಿನಿಮಾದಲ್ಲಿ ನಾಯಕ-ನಾಯಕಿ ನಡುವಿನ ಹಸಿಬಿಸಿ ದೃಶ್ಯಗಳೆಲ್ಲವೂ ಇರಲಿದೆ ಎಂದು ಸ್ವತಃ ಪವಿತ್ರಾ ಹೇಳಿದ್ದಾರೆ. ಇದೊಂದು ಬೋಲ್ಡ್ ಸಿನಿಮಾ. ಈ ಸಿನಿಮಾದಲ್ಲಿ ನಾಯಕ-ನಾಯಕಿ ಕೆಲವು ಬೋಲ್ಡ್ ದೃಶ‍್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂದಿದ್ದಾರೆ. ಮೇ 28 ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ.