ಬೆಂಗಳೂರು: ಟಾಲಿವುಡ್ ನಟ ನರೇಶ್ ಮತ್ತು ಕನ್ನಡ ನಟಿ ಪವಿತ್ರಾ ಲೋಕೇಶ್ ಮತ್ತೆ ಮದುವೆ ಸಿನಿಮಾ ಪ್ರಮೋಷನ್ ಗಾಗಿ ಬೆಂಗಳೂರಿಗೆ ಬಂದಿದ್ದು, ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡಿದ್ದಾರೆ.
ಪವಿತ್ರಾ ಹಾಗೂ ನರೇಶ್ ನಡುವಿನ ಸಂಬಂಧದ ಬಗ್ಗೆ ನರೇಶ್ ಪತ್ನಿ ರಮ್ಯಾ ತಗಾದೆ ತೆಗೆದಿದ್ದರು. ಇಬ್ಬರೂ ಮೈಸೂರು ಹೋಟೆಲ್ ನಲ್ಲಿ ಜೊತೆಯಾಗಿದ್ದಾಗ ರಮ್ಯಾ ಎಂಟ್ರಿ ಕೊಟ್ಟಿದ್ದು ಭಾರೀ ಸುದ್ದಿಯಾಗಿತ್ತು.
ಇದೀಗ ನರೇಶ್-ಪವಿತ್ರಾ ತಮ್ಮದೇ ನಿರ್ಮಾಣ, ನಟನೆಯಲ್ಲಿ ಮತ್ತೆ ಮದುವೆ ಎಂಬ ಸಿನಿಮಾ ಮಾಡಿದ್ದಾರೆ. ಇದರ ಪ್ರಮೋಷನ್ ಗಾಗಿ ಇಬ್ಬರೂ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ತಮ್ಮಿಬ್ಬರ ಸಂಬಂಧದ ಬಗ್ಗೆ ಯಾವುದೇ ಸಂಕೋಚವಿಲ್ಲದೇ ನರೇಶ್ ಮಾತನಾಡಿದ್ದಾರೆ.
ನಾವಿಬ್ಬರೂ ಸಹಜೀವನ ನಡೆಸುತ್ತಿದ್ದೇವೆ. ಸಹಜೀವನ ನಡೆಸುವುದು ತಪ್ಪಲ್ಲ. ಇದು ಗಂಡ-ಹೆಂಡತಿಯ ಸಂಬಂಧಕ್ಕೆ ಸಮ ಎಂದು ಸುಪ್ರೀಂಕೋರ್ಟೇ ಹೇಳಿದೆ. ನಮ್ಮಿಬ್ಬರ ಹೃದಯಗಳ ಮಧ್ಯೆ ಮದುವೆ ಆಗಿದೆ. ನಾವಿಬ್ಬರೂ ಖುಷಿಯಾಗಿದ್ದೇವೆ