Select Your Language

Notifications

webdunia
webdunia
webdunia
webdunia

ಬಚ್ಚನ್ ಕುಡಿ ಅಗಸ್ತ್ಯಾ ನಂದ ಸಿನಿಮಾ ಚೆನ್ನಾಗಿಲ್ಲ ಎಂದ ಪೋಸ್ಟ್ ಗೆ ಲೈಕ್ ಕೊಟ್ಟ ರವೀನಾ ಟಂಡನ್

ಬಚ್ಚನ್ ಕುಡಿ ಅಗಸ್ತ್ಯಾ ನಂದ ಸಿನಿಮಾ ಚೆನ್ನಾಗಿಲ್ಲ ಎಂದ ಪೋಸ್ಟ್ ಗೆ ಲೈಕ್ ಕೊಟ್ಟ ರವೀನಾ ಟಂಡನ್
ಮುಂಬೈ , ಭಾನುವಾರ, 10 ಡಿಸೆಂಬರ್ 2023 (09:40 IST)
ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಮೊಮ್ಮಗ ಅಗಸ್ತ್ಯಾ ನಂದ, ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಮುಂತಾದ ಸ್ಟಾರ್ ನಟರ ಮಕ್ಕಳು ಅಭಿನಯಿಸಿರುವ ದಿ ಆರ್ಚೀಸ್ ಸಿನಿಮಾ ಬಿಡುಗಡೆಯಾಗಿದೆ.

ಈ ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವರು ಸಿನಿಮಾ ಚೆನ್ನಾಗಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ವಿಶೇಷವೆಂದರೆ ಬಾಲಿವುಡ್ ನಟಿ ರವೀನಾ ಟಂಡನ್ ಕೂಡಾ ಇಂತಹ ಪೋಸ್ಟ್ ಒಂದಕ್ಕೆ ಲೈಕ್ ಕೊಟ್ಟು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ರೆಡಿಟ್ ನಲ್ಲಿ ನೆಟ್ಟಿಗರೊಬ್ಬರು ಸಿನಿಮಾ ಚೆನ್ನಾಗಿಲ್ಲ ಎಂದು ಪೋಸ್ಟ್ ಮಾಡಿದ್ದರು. ಇದಕ್ಕೆ ರವೀನಾ ಟಂಡನ್ ಲೈಕ್ ಮಾಡಿರುವುದು ಎಲ್ಲರ ಗಮನ ಸೆಳೆದಿದೆ.

ಘಟಾನುಘಟಿ ಸ್ಟಾರ್ ನಟರ ಮಕ್ಕಳು ನಟಿಸಿರುವ ಸಿನಿಮಾವಾಗಿದ್ದರೂ ರವೀನಾ ಈ ಸಿನಿಮಾ ಚೆನ್ನಾಗಿಲ್ಲ ಎಂದು ಬಹಿರಂಗವಾಗಿಯೇ ಹೇಳಲು ಯಾವುದೇ ಹಿಂಜರಿಕೆ ತೋರಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಮೂರನೇ ಸಿನಿಮಾಗೇ ಯಶ್ ಗೆ ಆಕ್ಷನ್ ಕಟ್ ಹೇಳುವ ಅದೃಷ್ಟ ಪಡೆದ ಗೀತು ಮೋಹನ್ ದಾಸ್ ಹಿನ್ನಲೆ