Publish Date: Sat, 30 Apr 2022 (08:30 IST)
Updated Date: Sat, 30 Apr 2022 (08:59 IST)
ಚೆನ್ನೈ: ಓರ್ವನನ್ನು ಕೊಲೆ ಮಾಡಿದ ನಾಲ್ವರು ಪಾಪಿಗಳು ಬಳಿಕ ಆತನ ಮೃತದೇಹದೊಂದಿಗೆ ಸೆಲ್ಫೀ ತೆಗೆದು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಮದನ್ ಎನ್ನುವ ಆಟೋ ಚಾಲಕನಿಗೆ ಮತ್ತು ಆರೋಪಿಗಳಿಗೆ ಕೆಲವು ದಿನಗಳ ಮೊದಲು ಜಗಳವಾಗಿತ್ತು. ಇದೇ ಧ್ವೇಷದಿಂದ ಪಾರ್ಟಿ ಮಾಡುವ ನೆಪದಲ್ಲಿ ಆಟದ ಮೈದಾನಕ್ಕೆ ಕರೆದ ನಾಲ್ವರು ಆತನಿಗೆ ಮದ್ಯಕುಡಿಸಿ ಮದ್ಯದ ಬಾಟಲಿಯಲ್ಲೇ ಹೊಡೆದು ಕೊಲೆ ಮಾಡಿದ್ದಾರೆ.
ಬಳಿಕ ಫೋಟೋವನ್ನು ವ್ಯಾಟ್ಸಪ್ ನಲ್ಲಿ ಹರಿಯಬಿಟ್ಟಿದ್ದಾರೆ. ಘಟನೆಯನ್ನು ಕಣ್ಣಾರೆ ಕಂಡ ಮದನ್ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾಳೆ. ಇದೀಗ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.