Select Your Language

Notifications

webdunia
webdunia
webdunia
webdunia

2 ನೇ ಬಲಿ ತೆಗೆದುಕೊಂಡ ಕೊರೊನಾ ವೈರಸ್

2 ನೇ ಬಲಿ ತೆಗೆದುಕೊಂಡ ಕೊರೊನಾ ವೈರಸ್
ನವದೆಹಲಿ , ಶನಿವಾರ, 14 ಮಾರ್ಚ್ 2020 (08:06 IST)
ನವದೆಹಲಿ : ಮಹಾಮಾರಿ ಕೊರೊನಾ ವೈರಸ್ ಗೆ ದೆಹಲಿಯಲ್ಲಿ ಮೊದಲ ಸಾವು ದಾಖಲಾಗಿದ್ದು, ಆ ಮೂಲಕ ದೇಶದಲ್ಲಿ ಕೊರೊನಾ 2 ನೇ ಬಲಿ ತೆಗೆದುಕೊಂಡಿದೆ.

ದೆಹಲಿಯ 68 ವರ್ಷದ ಮಹಿಳೆಗೆ ವಿದೇಶದಿಂದ ಬಂದಿದ್ದ ಪುತ್ರನಿಂದ ಸೋಂಕು ಹರಡಿದ್ದು, ಆಕೆಯನ್ನು ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಸಾವನಪ್ಪಿದ್ದಾಳೆ ಎಂಬುದಾಗಿ ತಿಳಿದುಬಂದಿದೆ.
 

ಈ ಹಿಂದೆ ಕಲಬುರಗಿಯಲ್ಲಿ ಕೊರೊನಾಗೆ ವೃದ್ದನೊಬ್ಬ ಸಾವನಪ್ಪಿದ್ದು, ಇದೀಗ ದೆಹಲಿಯಲ್ಲಿ ವೃದ್ಧೆಯೊಬ್ಬಳು ಸಾವನಪ್ಪಿದ್ದಾಳೆ. ಅಲ್ಲಿಗೆ ದೇಶದಲ್ಲಿ ಕೊರೊನಾಗೆ 2 ಬಲಿಯಾಗಿದೆ ಎನ್ನಲಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಭೀತಿಗೆ ಉದ್ಯೋಗ ಮೇಳ ಕ್ಯಾನ್ಸಲ್, ಐತಿಹಾಸಿಕ ರಥೋತ್ಸವಕ್ಕೆ ಬ್ರೇಕ್