Select Your Language

Notifications

webdunia
webdunia
webdunia
webdunia

ಕೊರೊನಾಗೆ ಬಲಿಯಾದ ವ್ಯಕ್ತಿಯ ಮನೆ ಸುತ್ತ ಹೈ ಅಲರ್ಟ್ : 5 ಕಿ.ಮೀ ಪ್ರದೇಶ ಬಫರ್ ಝೋನ್

ಕೊರೊನಾಗೆ ಬಲಿಯಾದ ವ್ಯಕ್ತಿಯ ಮನೆ ಸುತ್ತ ಹೈ ಅಲರ್ಟ್ : 5 ಕಿ.ಮೀ ಪ್ರದೇಶ ಬಫರ್ ಝೋನ್
ಕಲಬುರಗಿ , ಶುಕ್ರವಾರ, 13 ಮಾರ್ಚ್ 2020 (18:06 IST)
ಕೋರೋನಾ ವೈರಸ್‍ನಿಂದ ನಿಧನವಾಗಿರುವ ವ್ಯಕ್ತಿಯ ಮನೆಗೆ ಜಿಲ್ಲಾಧಿಕಾರಿ ಭೇಟಿ ನೀಡಿದ್ದಾರೆ.


ಕಲಬುರಗಿ ನಗರದ 76 ವರ್ಷದ ವಯೋವೃದ್ಧ  ಕೋರೋನಾ ವೈರಸ್‍ನಿಂದ ನಿಧನವಾಗಿರುವ ಹಿನ್ನೆಲೆಯಲ್ಲಿ ವ್ಯಕ್ತಿ ವಾಸಿಸುವ ವಾರ್ಡ್ ನಂಬರ್ 30ರ (ಕೆ.ಎನ್.ಜೆಡ್ ಫಂಕ್ಷನ್ ಹಾಲ್ ಬಳಿ) ಪ್ರದೇಶಕ್ಕೆ ಜಿಲ್ಲಾಧಿಕಾರಿ ಶರತ್ ಬಿ. ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.

 ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಪಾಲಿಕೆ ಮತ್ತು ಆರೋಗ್ಯಾಧಿಕರಿಗಳಿಗೆ ಸೊಂಕು ಹರಡುವಿಕೆಗೆ ತಡೆಗಟ್ಟಬಹುದಾದ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದರು.

ನಿಧನ ಹೊಂದಿದ ವ್ಯಕ್ತಿಯ ಮನೆಯಿರುವ ವಾರ್ಡ್‍ನ್ನು ಅಡಳಿತ ಬ್ಲಾಕ್/ ಕಂಟೇನ್‍ಮೆಂಟ್ ಝೋನ್ ಎಂದು ಪರಿಗಣಿಸಿ ಇಲ್ಲಿಂದ ಬೇರೆ ಪ್ರದೇಶಕ್ಕೆ ಸೊಂಕು ಹರಡದಂತೆ ಮುಂಜಾಗ್ರತವಾಗಿ ಸ್ಕ್ರೀನಿಂಗ್ ಮತ್ತು ಅರಿವು ಮೂಡಿಸುವ ಐ.ಇ.ಸಿ ಚಟುವಟಿಕೆಗಳು ತ್ವರಿತಗತಿಯಲ್ಲಿ ನಡೆಸಬೇಕು.

 ಇನ್ನು ಕಂಟೇನ್‍ಮೆಂಟ್ ಝೋನ್ ಸುತ್ತಮುತ್ತ 5 ಕಿ.ಮೀ ಪ್ರದೇಶ ಬಫರ್ ಝೋನ್ ಎಂದು ಗುರುತಿಸಿ ಸೊಂಕಿನ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳು ನಿರಂತರ ನಡೆಯಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಖಡಕ್ ಸೂಚನೆ ನೀಡಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಯಡಾ ಮಾರ್ಟಿನ್, ಡಿಸಿಪಿ ಕಿಶೋರ್ ಬಾಬು, ಜಿಲ್ಲಾ ಪಂಚಾಯತಿ ಸಿ.ಇ.ಓ. ಡಾ.ಪಿ.ರಾಜಾ, ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ಸೇರಿದಂತೆ ಮಹಾನಗರ ಪಾಲಿಕೆ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳಿದ್ದರು.



Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾಗೆ ಮೊದಲ ಸಾವು : 16 ಐಸೋಲೇಷನ್ ವಾರ್ಡ್ ಸಿದ್ಧ