Select Your Language

Notifications

webdunia
webdunia
webdunia
webdunia

ಕೊರೊನಾ ಭೀತಿಗೆ ಶರಣಬಸವೇಶ್ವರ ಜಾತ್ರೆ ರದ್ದು ; ಸಿಎಂ, ಡಿಸಿ ಆದೇಶ

ಕೊರೊನಾ ಭೀತಿಗೆ ಶರಣಬಸವೇಶ್ವರ ಜಾತ್ರೆ ರದ್ದು ; ಸಿಎಂ, ಡಿಸಿ ಆದೇಶ
ಕಲಬುರಗಿ , ಶುಕ್ರವಾರ, 13 ಮಾರ್ಚ್ 2020 (17:12 IST)
ರಾಜ್ಯದಲ್ಲಿ ಕೊರೊನಾ ವೈರಸ್ ಗೆ ಕಲಬುರಗಿಯಲ್ಲಿ ಮೊದಲ ಸಾವಿನ ಪ್ರಕರಣ ಕಂಡುಬಂದಿರುವುದರಿಂದಾಗಿ ಇಂದು ನಡೆಯಬೇಕಿದ್ದ ಕಲಬುರಗಿಯ ಪ್ರಖ್ಯಾತ ಶರಣಬಸವೇಶ್ವರ ಜಾತ್ರೆಯನ್ನು ರದ್ದುಗೊಳಿಸಲಾಗಿದೆ.

ಕಲಬುರಗಿ ಜಿಲ್ಲೆಯ ಎಲ್ಲಾ ಶಾಲೆ – ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಕೋವಿಡ್ 19 ಕ್ಕೆ ದೇಶದಲ್ಲಿ ಮೊದಲ ಸಾವು ಕಲಬುರಗಿಯಲ್ಲಿ ಸಂಭವಿಸಿದೆ. ಮೃತ ವ್ಯಕ್ತಿಗೆ ಕೊರೊನಾ ಇರುವ ಕುರಿತು ದೃಢಪಟ್ಟಿದೆ. ಮೃತ ವ್ಯಕ್ತಿ ಮಹ್ಮದರ್ ಹುಸೈನ್ ಸಿದ್ಧಿಕಿಯ ಕುಟುಂಬಸ್ಥರು ಹಾಗೂ ಅವರು ಯಾರ ಜೊತೆ ಒಡನಾಟ ಹೊಂದಿದ್ದರು ಅವರನ್ನೆಲ್ಲಾ ಚಿಕಿತ್ಸೆಗೆ ಒಳಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಶರತ್ ಹೇಳಿದ್ದಾರೆ.

ಇನ್ನು, ಕಲಬುರಗಿ ಜಿಲ್ಲೆಯಲ್ಲಿ ನಡೆಯಲಿರುವ ಎಲ್ಲಾ ಜಾತ್ರೆ, ಮೆರವಣಿಗೆಗಳನ್ನು ರದ್ದುಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಆರೋಗ್ಯ ,ವೈದ್ಯಕೀಯ ಶಿಕ್ಷಣ ಸಚಿವರು ಕೊರೊನಾ ಬಗ್ಗೆ ಮಾಹಿತಿ ನೀಡ್ತಿಲ್ಲ-ಸಿದ್ದರಾಮಯ್ಯ ಆರೋಪ