Publish Date: Thu, 12 Mar 2020 (16:52 IST)
Updated Date: Thu, 12 Mar 2020 (16:55 IST)
ಚೀನಾದಲ್ಲಿ ಕಾಣಿಸಿಕೊಂಡು ಜಾಗತಿಕವಾಗಿ ಹರಡುತ್ತಿರುವ ಕೊರೊನಾ ಮಹಾಮಾರಿಗೆ ರಾಜ್ಯದಲ್ಲಿ ಮತ್ತೊಬ್ಬರು ತತ್ತರಿಸಿದ್ದಾರೆ.
ಆ ಮೂಲಕ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಸಧ್ಯ 5 ಕ್ಕೆ ತಲುಪಿದೆ.
ಆಸ್ಪತ್ರೆಯಲ್ಲಿ ಯುವಕನಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಕೊರೊನಾ ವೈರಸ್ ಪತ್ತೆ ಯಾಗಿರುವ ಕಾರಣದಿಂದ ನಿಗಾ ವಹಿಸಲಾಗಿದೆ ಅಂತ ಆರೋಗ್ಯ ಇಲಾಖೆ ತಿಳಿಸಿದೆ.
ಏತನ್ಮಧ್ಯೆ, ಕೊರೊನಾ ವೈರಸ್ ಪತ್ತೆಯಾಗಿರುವ ಯುವಕ ಗ್ರೀಸ್ ನಿಂದ ಆಗಮಿಸಿದ್ದನು. ದೇಶದಲ್ಲಿ ಈವರೆಗೆ 74 ಜನರಲ್ಲಿ ಕೊರೊನಾ ವೈರಸ್ ಲಕ್ಷಣಗಳು ಕಂಡುಬಂದಿವೆ ಎಂದು ವರದಿ ತಿಳಿಸಿದೆ.