Select Your Language

Notifications

webdunia
webdunia
webdunia
webdunia

ಹಿಂದಿ ಭಾಷಾ ಹೇರಿಕೆಗೆ ತೀವ್ರ ವಿರೋಧ

ಹಿಂದಿ ಭಾಷಾ ಹೇರಿಕೆಗೆ ತೀವ್ರ ವಿರೋಧ
ಗದಗ , ಸೋಮವಾರ, 14 ಸೆಪ್ಟಂಬರ್ 2020 (20:40 IST)
ಕೇಂದ್ರ ಸರ್ಕಾರ ದೇಶದಲ್ಲಿ ಹಿಂದಿ ಭಾಷಾ ಹೇರಿಕೆ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಹಿಂದಿ ಭಾಷಾ ಹೇರಿಕೆ ಮಾಡಲಾಗುತ್ತಿದೆ ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ) ಕಾಯ೯ಕತ೯ರು ಗದಗ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದಾರೆ.  
ಆಯಾ ರಾಜ್ಯದಲ್ಲಿ ಅಲ್ಲಿನ ಸ್ಥಳೀಯ ನುಡಿ ಸಾರ್ವಭೌಮತ್ವ ಎತ್ತಿ ಹಿಡಿಯಬೇಕು.

ಸಂವಿಧಾನದ ಪರಿಚ್ಛೇದದಲ್ಲಿನ ಎಲ್ಲಾ ಭಾಷೆಗಳಿಗೂ ಅಧಿಕೃತ ಸ್ಥಾನಮಾನ ಸಿಗಬೇಕು. ನಿರಂತರ ಹಿಂದಿ ಸಪ್ತಾಹ, ಹಿಂದಿ ಭಾಷೆ ಹೆಸರಿನಲ್ಲಿ ಕನ್ನಡಿಗರ ಕಡೆಗಣನೆಯಾಗುತ್ತಿದೆ ಎ೦ದು ಪ್ರತಿಭಟನಾಕಾರರು ಆರೋಪಿಸಿ ಘೋಷಣೆ ಹಾಕಿದ್ದಾರೆ.  

ಭಾರತ ಭಾಷಾ ವೈವಿಧ್ಯತೆಯನ್ನ ಗೌರವಿಸಲು ಕೇಂದ್ರ ಸರಕಾರ ಮುಂದಾಗಲಿ ಎ೦ದು ಪ್ರತಿಭಟನಾಕಾರರು ಈ ಸ೦ದಭ೯ದಲ್ಲಿ ಒತ್ತಾಯಿಸಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ : ಪೊಲೀಸ್ ದಾಳಿಯಲ್ಲಿ ಸಿಕ್ಕ ಗಾಂಜಾ ಎಷ್ಟು?