Select Your Language

Notifications

webdunia
webdunia
webdunia
webdunia

ಸೊಸೆಯ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿಯಾಗಿಸಿದ ಮಾವ

rape pregnant
delhi , ಶುಕ್ರವಾರ, 24 ನವೆಂಬರ್ 2023 (12:34 IST)
ಮಾವ ತನ್ನ ಮೇಲೆ ಅತ್ಯಾಚಾರ ನಡೆಸಿ ಬೆದರಿಕೆ ಒಡ್ಡಿದ್ದಾನೆ ಎಂದು ಪೀಡಿತೆ ಆರೋಪ ಮಾಡಿದ್ದಾಳೆ.  ಆರೋಪಿಯನ್ನು  ಗುರುತಿಸಲಾಗಿದೆ . ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
 
ಮಾವನೇ ತನ್ನ ಸೊಸೆಯ ಮೇಲೆ ಬಲಾತ್ಕಾರ ಮಾಡಿದ ಪರಿಣಾಮ ಆಕೆ ಗರ್ಭವತಿಯಾದ ಘಟನೆ ಮುಜಪ್ಫರ್ ನಗರ್‌ನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಮೇಲೆ  ಪ್ರಕರಣವನ್ನು  ದಾಖಲಿಸಲಾಗಿದೆ. 
 
7 ತಿಂಗಳ ಗರ್ಭವತಿ ಮಹಿಳೆಯೊಬ್ಬರು ಜಿಲ್ಲಾ ಮಾಜಿಸ್ಟ್ರೇಟ್ ಬಳಿ ಗರ್ಭಪಾತ ಮಾಡಿಸಲು  ಅನುಮತಿ ಕೋರಿ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. 
 
ಆರೋಪಿ ಮಾವ ಸಾಜಿದ್ ಮತ್ತು ಆತನ ಹೆಂಡತಿ  ನಇಮಾ ವಿರುದ್ಧ  ಭಾರತೀಯ ದಂಡ ಸಂಹಿತೆಯ 376 ನೇ ವಿಧಿ( ಅತ್ಯಾಚಾರ),  506( ಕ್ರಿಮಿನಲ್ ಬೆದರಿಕೆ), ಮತ್ತು 120 (ಕ್ರಿಮಿನಲ್ ಸಂಚು) ಪ್ರಕಾರ  ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೋಲಿಸ್ ಅಧಿಕಾರಿ ಹೇಳಿದ್ದಾರೆ. 
 
ತನಿಖೆಗೆ ಆದೇಶ ನೀಡಿರುವ ಜಿಲ್ಲಾ ಮಾಜಿಸ್ಟ್ರೇಟ್, ಅವಶ್ಯಕ  ಕ್ರಮವನ್ನು  ತೆಗೆದುಕೊಳ್ಳುವ ನಿಟ್ಟಿನಲ್ಲಿ ಪ್ರಕರಣವನ್ನು ಮುಖ್ಯ ವೈದ್ಯಕೀಯ ಅಧಿಕಾರಿಯವರಿಗೆ ಹಸ್ತಾಂತರಿಸಿದ್ದಾರೆ.  ಮಹಿಳೆಯನ್ನು ವೈದ್ಯಕೀಯ  ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಶಾಲಾದಿನಗಳನ್ನು ಸ್ಮರಿಸಿದ ಪ್ರಧಾನಿ ಮೋದಿ