Publish Date: Thu, 23 Nov 2023 (14:22 IST)
Updated Date: Thu, 23 Nov 2023 (13:53 IST)
ರಾಜಧಾನಿಯಲ್ಲಿ ಪುಂಡರ ಹಾವಳಿ ನಿಂತಿಲ್ಲ.ಪೊಲೀಸರಿದ್ದಾರೆಂದು ಬೆಚ್ಚಗೆ ಮಲಗಿದರೇ ಸೈಲೆಂಟ್ ಆಗಿ ಕಳ್ಳರು ಕೈಚಳಕ ತೊರಿಸ್ತಾರೆ .ಹೀಗಾಗಿ ಪೊಲೀಸರ ಭಯವಿಲ್ಲದ ಪುಂಡರಿಗೆ ಸ್ಥಳೀಯರು ಬಿಸಿ ಮುಟ್ಟಿಸಿದಾರೆ.ಪಣತ್ತೂರು ದಿಣ್ಣೆಯಲ್ಲಿ ರಾತ್ರಿ ಸರಣಿ ಅಂಗಡಿ ಕಳ್ಳತನವಾಗಿದೆ.ಮೂರು ಅಂಗಡಿ ಎಗರಿಸಿ ನಾಲ್ಕನೇ ಅಂಗಡಿಗೆ ಕಳ್ಳ ಕಾಲಿಡುತಿದ್ದ ಇದನ್ನ ಕಂಡ ಸ್ಥಳೀಯರು ಕಳ್ಳನನ್ನ ಸೆರೆ ಹಿಡಿದಿದ್ದಾರೆ.ಕಳ್ಳನ ಹಿಡಿದು ಪೊಲೀಸರಿಗೆ ಸ್ಥಳೀಯರು ಒಪ್ಪಿಸಿದ್ದಾರೆ.ವರ್ತೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು,ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.