Publish Date: Wed, 22 Nov 2023 (14:21 IST)
Updated Date: Wed, 22 Nov 2023 (15:23 IST)
ಬೆಂಗಳೂರಿನಲ್ಲಿ ನೆರೆಮನೆಯವರ ಸಮಯ ಪ್ರಜ್ಞೆಯಿಂದಾಗಿ ದಿಕ್ಕಾಪಾಲಾಗಿ ಮನೆಗಳ್ಳರು ಓಡಿಹೋಗಿರುವ ಘಟನೆ ನಾಗರಬಾವಿಯ ಪೂರ್ಣಚಂದ್ರ ಲೇಔಟ್ ನಲ್ಲಿ ನಡೆದಿದೆ.
ನವೆಂಬರ್ 21 ರ ಬೆಳಗಿನ ಜಾವ 3 ಗಂಟೆ ವೇಳೆಗೆ ಕೃತ್ಯ ನಡೆದಿದೆ.ರಾಡ್ ನಿಂದ ಮನೆ ಬಾಗಿಲು ಒಡೆದು ಕಳ್ಳರು ಒಳನುಸುಳಿದ್ದರು.ಎರಡು ಬೈಕ್ ಗಳಲ್ಲಿ ಬಂದಿದ್ದ ಮೂವರು ಕಳ್ಳರಿಂದ ಕೃತ್ಯ ನಡೆದಿದೆ.
ಕಳ್ಳರು ಚಲನವಲನ ದೃಶ್ಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ.ನೆರೆಮೆನೆಯವರು ಕೂಗಾಡ್ತಿದ್ದಂತೆ ಕದ್ದಿದ್ದ ಬೆಳ್ಳಿ ಆಭರಣಗಳ ಬಿಟ್ಟು ಎಸ್ಕೇಪ್ ಆಗಿದ್ದು,ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.