Select Your Language

Notifications

webdunia
webdunia
webdunia
webdunia

ಕಳ್ಳತನವೆಸಗಿ ಕರೋಡ್‌ಪತಿಯಾದ ಕಳ್ಳನ ರೋಚಕ ಕಥೆ

ಕಳ್ಳತನವೆಸಗಿ ಕರೋಡ್‌ಪತಿಯಾದ ಕಳ್ಳನ ರೋಚಕ ಕಥೆ
vododara , ಬುಧವಾರ, 22 ನವೆಂಬರ್ 2023 (10:48 IST)
ರೋಚಕ ಕಥೆಯ ಕಳ್ಳ ಜಗನ್ ಎನ್ನುವ ಆರೋಪಿ.  ಐಷಾರಾಮಿ ಕಾರುಗಳಿಂದ ನಗದನ್ನು ಮತ್ತು ಬೆಲೆಬಾಳುವ ವಸ್ತುಗಳನ್ನು ಚಾಣಾಕ್ಷತನದಿಂದ ಕದಿಯುತ್ತಿದ್ದ ಕಳ್ಳರ ಗುಂಪಿನ ನಾಯಕನಾಗಿದ್ದ. ಗುಂಪಿನ ಸದಸ್ಯರು ವಾಹನಗಳ ಮುಂದೆ 10 ರೂಪಾಯಿಯ ಕೆಲವು  ನೋಟುಗಳನ್ನು ಎಸೆಯುತ್ತಿದ್ದರು. ಅದನ್ನು ಆಯ್ದುಕೊಳ್ಳಲು  ಕಾರ್ ಒಳಗಿದ್ದವರು ಹೊರಗೆ ಬಂದ ಕೂಡಲೇ ಅವರು ಕಾರ್ ಒಳಗೆ ಇಟ್ಟಿದ್ದ ಬೆಲೆಬಾಳುವ ವಸ್ತುಗಳನ್ನು ಕದಿಯುತ್ತಿದ್ದರು. 
 
ಗುಜರಾತ್ ರಾಜ್ಯದಾದ್ಯಂತ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ ಚತುರ ಕಳ್ಳನೊಬ್ಬ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.  ತಮಿಳುನಾಡಿನ ತಿರುಚನಾಪಳ್ಳಿಯಲ್ಲಿಯಲ್ಲಿ ಕ್ರೈಂ ಬ್ರಾಂಚ್ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿರುವ ಜಗನ್,  ಗುಜರಾತಿನಲ್ಲಿ  ಕೋಟ್ಯಾಂತರ ರೂಪಾಯಿ ಮೌಲ್ಯದ ವಸ್ತುಗಳ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ 'ಮೋಸ್ಟ್ ವಾಂಟೆಡ್ ಅಪರಾಧಿ' ಎಂದು ಪೊಲೀಸರು ತಿಳಿಸಿದ್ದಾರೆ. 
 
ಜಗನ್ ತಂಡ ಒಮ್ಮೆ ಬರೊಬ್ಬರಿ 80 ಲಕ್ಷ ರೂಪಾಯಿಗಳನ್ನು ಲಪಟಾಯಿಸಲು ಯಶಸ್ವಿಯಾಗಿತ್ತು.  ಮೈದಾನವೊಂದರಲ್ಲಿ 10 ರೂಪಾಯಿಯ ಕೆಲ ನೋಟುಗಳನ್ನು ಚೆಲ್ಲಿದ ಜಗನ್ ತಂಡದ ಸದಸ್ಯನೊಬ್ಬ, ನಂತರ ಅಲ್ಲೇ ಹತ್ತಿರದಲ್ಲಿ ನಿಂತಿದ್ದ ಕಾರ್ ಮಾಲೀಕನ ಬಳಿ  ಆ ನೋಟುಗಳು ನಿಮ್ಮದಾ ಎಂದು ಕೇಳಿದ, ನೋಟುಗಳನ್ನು ಎತ್ತಿಕೊಳ್ಳಲು ಕಾರ್ ಮಾಲೀಕ ಬಾಗಿದಾಗ, ತಂಡದ ಇನ್ನೊಬ್ಬ ಸದಸ್ಯ ಕಾರಿನ ಹಿಂದುಗಡೆ ಸೀಟಿನಲ್ಲಿಡಲಾಗಿದ್ದ ಹಣದ ಬ್ಯಾಗ್ ಎತ್ತಿಕೊಂಡು ಪರಾರಿಯಾಗಿದ್ದ  ಎಂದು ಅಪರಾಧ ದಳದ ಪೊಲೀಸರು ಜಗನ್ ಗುಂಪಿನ ಖತರನಾಕ್ ಕಳ್ಳರ ಕಳ್ಳತನದ ವೈಖರಿಗೆ ಒಂದು ಉದಾಹರಣೆ ನೀಡುತ್ತಾರೆ. 
 
ಅಲ್ಲಿ ಕಳ್ಳತನ ಮಾಡಿಕೊಂಡಿದ್ದ ಜಗನ್ ತಮಿಳುನಾಡಿನಲ್ಲಿ ಜಂಟಲ್ ಮನ್ ತರ ಓಡಾಡಿಕೊಂಡಿದ್ದ. ವಿಶೇಷವೆಂದರೆ ತಿರುಚನಾಪಳ್ಳಿಯಲ್ಲಿ ಜಗನ್ ಮನೆ ಅಕ್ಕಪಕ್ಕದಲ್ಲಿ ವಾಸಿಸುತ್ತಿದ್ದ ಯಾರೊಬ್ಬರಿಗು ಕೂಡ ಆತ ಕಳ್ಳನೆಂಬುದು ತಿಳಿದಿರಲಿಲ್ಲ. ಜಗನ್ ತಿರುಚನಾಪಳ್ಳಿಯಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಬಂಗಲೆ ಹೊಂದಿದ್ದಾನೆ. ಆತನ ಮಕ್ಕಳು ಪ್ರತಿಷ್ಠಿತ ಶಾಲೆಗಳಲ್ಲಿ ಓದುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 
ಆತನ ಕುರಿತು ಪೊಲೀಸರಿಗೆ ಸಹ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಇತ್ತೀಚಿಗೆ ಜಗನ್ ಗುಂಪಿನ ಸದಸ್ಯನೊಬ್ಬ ಕ್ರೈಂ ಬ್ರಾಂಚ್ ಬಲೆಗೆ ಬಿದ್ದಿದ್ದ. ಆ ಸಂದರ್ಭದಲ್ಲಾತ ಪೊಲೀಸರಿಗೆ ಜಗನ್ ಹೆಸರನ್ನು ಹೇಳಿದ್ದಾನೆ. 
 
ಆತನು ನೀಡಿದ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆಗಿಳಿದ ನಾವು ತಮಿಳುನಾಡಿನ ಕ್ರೈಂ ಬ್ರಾಂಚ್ ಅಧಿಕಾರಿಗಳನ್ನು ಸಂಪರ್ಕಿಸಿದೆವು ಮತ್ತು ನಮ್ಮ ತಂಡವೊಂದನ್ನು ಅಲ್ಲಿಗೆ ಕಳುಹಿಸಿದೆವು. ಅಲ್ಲಿ ಜಗನ್ ನಮ್ಮ ಕೈಗೆ ಸಿಕ್ಕಿ ಹಾಕಿಕೊಂಡ ಎಂದು ಗುಜರಾತ್ ಪೊಲೀಸ್ ಮೂಲಗಳು ತಿಳಿಸಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಕಪ್ಪುಹಣ ಯಾವಾಗ ತರ್ತಾರೆ: ಕಾಂಗ್ರೆಸ್ ಲೇವಡಿ