ಪ್ರಧಾನಿ ಮೋದಿ ಕಪ್ಪು ಹಣ ಯಾವಾಗ ತರುತ್ತಾರೆ ಎನ್ನುವ ಬಗ್ಗೆ ಕಾತುರದಿಂದ ನಿರೀಕ್ಷಿಸುತ್ತಿದ್ದೇವೆ. ತದ ನಂತರ ದೇಶಕ್ಕೆ ಒಳ್ಳೆಯ ದಿನಗಳು ಬರಲಿವೆ ಎನ್ನುವ ಬಗ್ಗೆ ವಿಶ್ವಾಸವಿಡಬಹುದು ಎಂದು ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಟಾಂಗ್ ನೀಡಿದ್ದಾರೆ.
ವಿದೇಶಿ ಬ್ಯಾಂಕ್‌ಗಳಲ್ಲಿರುವ ಭಾರತೀಯರ ಕಪ್ಪು ಹಣವನ್ನು ಮರಳಿ ತರುವುದೇ ನಮ್ಮ ಆದ್ಯತೆ ಎಂದು ಪ್ರಧಾನಿ ಮೋದಿ ನೀಡಿರುವ ಹೇಳಿಕೆಯನ್ನು ಸ್ವಾಗತಿಸಿ ಮೋದಿ ಕಪ್ಪುಹಣ ಯಾವಾಗ ತರ್ತಾರೆ ಎಂದು ಕಾಯುತ್ತಿದ್ದೇವೆ ಎಂದು ಲೇವಡಿ ಮಾಡಿದ್ದಾರೆ.
ಕಪ್ಪು ಹಣವನ್ನು ಮರಳಿ ತರುವುದಕ್ಕೆ ಜಿ-20 ರಾಷ್ಟ್ರಗಳ ಸಹಕಾರ ಆಗತ್ಯವಾಗಿದೆ. ಲೆಕ್ಕವನ್ನೇ ಹೊಂದಿರದ ಹಣ ಭದ್ರತಾ ಸವಾಲ್‌ಗಳಿಗೆ ಕೂಡಾ ಸಮಸ್ಯೆಯಾಗಬಹುದು ಎಂದು ಮೋದಿ ಆತಂಕ ವ್ಯಕ್ತಪಡಿಸಿದ್ದಾರೆ.
ಕಪ್ಪು ಹಣವನ್ನು ಮರಳಿ ತರುವ ಬಗ್ಗೆ ಕೇಂದ್ರ ಸರಕಾರ ಈಗಾಗಲೇ ಕಾರ್ಯಾರಂಭ ಮಾಡಿದೆ. ಇತರ ರಾಷ್ಟ್ರಗಳು ಕೂಡಾ ಭಾರತಕ್ಕೆ ಸಹಕಾರ ನೀಡುವುದು ಅಗತ್ಯವಾಗಿದೆ. ಆಸ್ಟ್ರೇಲಿಯಾ ಸರಕಾರ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದೆ. ತೆರಿಗೆ ವಂಚಿಸುವವರ ವಿರುದ್ಘಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆಯ ಸಂದೇಶ ಸಾರಿದೆ ಎಂದು ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.