Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಸರ್ಕಾರದ ವಿರುದ್ಧ ‌ಆರ್ ಅಶೋಕ್ ವಾಗ್ದಾಳಿ

R Ashok
bangalore , ಸೋಮವಾರ, 20 ನವೆಂಬರ್ 2023 (21:00 IST)
ಇಂದು ಸರ್ಕಾರಕ್ಕೆ ಆರು ತಿಂಗಳು, ಸರ್ಕಾರದ ಸಾಧನೆಗಳ ಬಗ್ಗೆ ಸರ್ಕಾರಿ ಜಾಹೀರಾತು ವಿಚಾರವಾಗಿ ನಗರದಲ್ಲಿ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.ಈ ಸರ್ಕಾರ ಅರೆಬರೆ ಗ್ಯಾರಂಟಿ ಕೊಟ್ಟಿದೆ.ಇವರು ಜಾಹೀರಾತು ಕೊಟ್ಟಿ ಗ್ಯಾರಂಟಿಗಳಿಂದಾಗಿ ಫಲಾನುಭವಿಗಳು ಖುಷಿಯಾಗಿದ್ದಾರೆ ಅಂದಿದ್ದಾರೆ.ಜನ ಖುಷಿಯಾಗಿದ್ರೆ ಇನ್ನೂ ಯಾಕೆ ಜನ ಕ್ಯೂನಲ್ಲಿ ನಿಂತ್ಕೊಳ್ತಿದ್ದಾರೆ.ಗ್ಯಾರಂಟಿಗಳು ಜನರಿಗೆ ತಲುಪಿಲ್ಲ, ಗ್ಯಾರಂಟಿಗಳು ವಿಫಲ‌.ಸರ್ಕಾರ ಸಮರ್ಪಕ ವಿದ್ಯುತ್ ಕೊಡ್ತಿಲ್ಲ ಎಂದು ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
 
ಕಾಡುಗೋಡಿ ವಿದ್ಯುತ್ ಅವಘಡ ಪ್ರಕರಣದಲ್ಲಿ  ತಾಯಿ ಮಗು ಸಾವನಾಪ್ಪಿದ್ದು, ತಾಯಿ ಮಗು ಸಾವಿಗೆ ಸರ್ಕಾರ ಕಾರಣ ಎಂದು ಅಶೋಕ್ ಕಿಡಿಕಾರಿದ್ದಾರೆ.ಇಂಧನ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಕೆಲಸ ಮಾಡಲಿ.ಮೃತರಿಗೆ ತಲಾ 25 ಲಕ್ಷ ಪರಿಹಾರವನ್ನು ಸರ್ಕಾರ ಕೊಡಲಿ ಎಂದು ಆರ್ ಅಶೋಲ್ ಆಗ್ರಹಿಸಿದ್ರು.
 
ಇನ್ನೂ ಸಚಿವ ಸತೀಶ್ ಜಾರಕಿಹೊಳಿಯಿಂದ ದುಬೈ ಪ್ರವಾಸ ವಿಚಾರವಾಗಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಪ್ರತಿಕ್ರಿಯಿಸಿದ್ದು,ಹಿಂದೆ ಬೆಳಗಾವಿಯಿಂದ ಸರ್ಕಾರನೇ ಬಿದ್ದು ಹೋಗಿತ್ತು.ಮತ್ತೆ ಬೆಳಗಾವಿ ಬೆಂಕಿ ಜ್ವಾಲೆಯಾಗಿ ದುಬೈ ವರೆಗೆ ಹೋಗಿದೆ.ಲೋಕಸಭಾ ಚುನಾವಣೆ ನಂತರ ಸರ್ಕಾರ ಇರೋದಿಲ್ಲ.ಕಾಂಗ್ರೆಸ್ಸಿನ ಅವನತಿಗೆ ಇದೆಲ್ಲವೂ ಕಾರಣ.ರಾಜ್ಯದಲ್ಲಿ ಒಬ್ಬರು ಅಲ್ಲ, ಮೂವರು ಸಿಎಂ ಗಳಿದ್ದಾರೆ.ಮುಂದೆ ಅವರು ಯಾವ ಯಾವ ದಿಕ್ಕಿನಲ್ಲಿ ಹೋಗ್ತಾರೋ ನೋಡೋಣ ಎಂದು ಆರ್ ಅಶೋಕ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಂಪನಿ ವಿರುದ್ಧ ಡೆತ್​​ ನೋಟ್ ಬರೆದಿಟ್ಟು ಆತ್ಮಹತ್ಯೆ