ನಗರದ ಪಂಚತಾರಾ ಹೋಟೆಲ್ ಮೇಲೆ ದಾಳಿ ನಡೆಸಿ ಓರ್ವ ಟಾಲಿವುಡ್ ನಟಿ, ಬೆಂಗಾಲಿ ಕಿರುತೆರೆ ನಟಿ ಸೇರಿದಂತೆ ಒಟ್ಟು ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೈಟೆಕ್ ವೈಶ್ಯಾವಾಟಿಕೆಯನ್ನು ಭೇದಿಸಿರುವ ಉತ್ತರ ವಲಯ ಟಾಸ್ಕ್ ಫೋರ್ಸ್ ಪೊಲೀಸರು ಇಬ್ಬರು ನಟಿಯರನ್ನು ಬಂಧಿಸಿದ್ದಾರೆ.
ಹೋಟೆಲ್ ಮಾಲೀಕನನ್ನು ಸಹ ಬಂಧಿಸಲಾಗಿದ್ದು, ಆತನಿಂದ 55 ಸಾವಿರ ಹಣ ಹಾಗೂ ಮೊಬೈಲ್ ಅನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳನ್ನು ಪೊಲೀಸರ ವಶಕ್ಕೆ ನೀಡಲಾಗಿದೆ ಎಂದು ಹೇಳಿದ್ದಾರೆ.