Select Your Language

Notifications

webdunia
webdunia
webdunia
webdunia

ಕುಮಾರ್‌ಸೋಮಿ ಕರೆಂಟ್ ಕಳ್ಳ' ಪೋಸ್ಟರ್ ಅಂಟಿಸಿದವ ಸಿಕ್ಬಿಟ್ಟ

ಕುಮಾರ್‌ಸೋಮಿ ಕರೆಂಟ್ ಕಳ್ಳ' ಪೋಸ್ಟರ್ ಅಂಟಿಸಿದವ ಸಿಕ್ಬಿಟ್ಟ
bangalore , ಗುರುವಾರ, 23 ನವೆಂಬರ್ 2023 (21:00 IST)
ಹೆಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಕರೆಂಟ್‌ ಕಳ್ಳ ಕುಮಾರ್‌ಸೋಮಿ ಎಂದು ಪೋಸ್ಟರ್‌ ಅಂಟಿಸಿ ಕುಕೃತ್ಯ ಮೆರೆದ ಕಾಂಗ್ರೆಸ್‌ ಮುಖಂಡನನ್ನು ಜೆಡಿಎಸ್‌ ಕಾರ್ಯಕರ್ತರು ಕಂಡುಹಿಡಿದ್ದಾರೆ. ಪೊಲೀಸರಿಗೆ ಸಿಸಿಟಿವಿ ಫೂಟೇಜ್‌ ಸಮೇತ ಆರೋಪಿ ಯಾರೆಂಬುದನ್ನು ಪತ್ತೆಮಾಡಿ ಕರೆತಂದಿದ್ದು, ಕೂಡಲೇ ದೂರು ನೀಡಿದರೂ ಆರೋಪಿ ಬಂಧಿಸದೇ ನಿರ್ಲಕ್ಷ್ಯ ಮಾಡಿದ್ದಾರೆ.ಇನ್ನು ಕೂಡಲೇ  ಕ್ರಮ ಕೈಗೊಳ್ಳುವಂತೆ ಜೆಡಿಎಸ್‌ ಕಾರ್ಯಕರ್ತರು ಪೊಲೀಸ್‌ ಕಮಿಷನರ್ ದಯಾನಂದ್‌ಗೆ ಎಚ್ಚರಿಕೆ ನೀಡಿದ್ದಾರೆ.

ಸಮಾಜದಲ್ಲಿ ಹಣದ ಮದ ಹತ್ತಿಸಿಕೊಂಡವರು ಎಲ್ಲವನ್ನೂ ಕೊಂಡುಕೊಳ್ಳುತ್ತೇನೆ ಎಂದುಕೊಂಡಿದ್ದಾರೆ. ಆದರೆ ಎಲ್ಲದಕ್ಕೂ ಒಂದು ಅಂತ್ಯವೆಂಬುದು ಇದ್ದೇ ಇರುತ್ತದೆ. ನನ್ನ ವಿರುದ್ಧ ಯಾರು ಬೇಕಾದರೂ ಪೋಸ್ಟರ್ ಅಂಟಿಸಿಕೊಳ್ಳಲಿ, ಬೇಡ ಎನ್ನುವುದಿಲ್ಲ. ನನಗೆ ಯಾರು ಏನೂ ಮಾಡಲು ಸಾಧ್ಯವಾಗುವುದಿಲ್ಲವೆಂದು ತಮ್ಮ ವಿರುದ್ಧದ ಪೋಸ್ಟರ್ ವಾರ್ ವಿಚಾರವಾಗಿ ಕುಮಾರಸ್ವಾಮಿ ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಹೋಗು ಅಂದರೆ ಹೋಗೋಕೆ ತಾಳಿ ಕಟ್ಟಿದ ಹೆಂಡತಿ ನಾನಲ್ಲ-ಇಬ್ರಾಹಿಂ