Select Your Language

Notifications

webdunia
webdunia
webdunia
webdunia

ಆಸ್ಪತ್ರೆಯ ಮಹಿಳಾ ಸಿಬ್ಬಂದಿ ಮೇಲೆಯೇ ಅತ್ಯಾಚಾರವೆಸಗಿದ ಕಾಮುಕ

ಆಸ್ಪತ್ರೆಯ ಮಹಿಳಾ ಸಿಬ್ಬಂದಿ ಮೇಲೆಯೇ ಅತ್ಯಾಚಾರವೆಸಗಿದ ಕಾಮುಕ
uttar pradesh , ಶುಕ್ರವಾರ, 24 ನವೆಂಬರ್ 2023 (10:40 IST)
ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿ ಜಾಮೀನಿನ ಮೇಲೆ ಜೈಲಿನಿಂದ ಹೊರಗೆ ಬಂದಿದ್ದ ವ್ಯಕ್ತಿ( ಆಸ್ಪತ್ರೆ ಮಾಲೀಕನ ಸೋದರಳಿಯ)  ನ್ಯೂ ಬಾಸ್ ರಸ್ತೆಯಲ್ಲಿರುವ  ಸಿಟಿ ಆಸ್ಪತ್ರೆಗೆ  ಆಗಮಿಸಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಹೇಯ ಘಟನೆ ವರದಿಯಾಗಿದೆ. 
 
ಆಸ್ಪತ್ರೆಯಲ್ಲಿ ಸಹಾಯಕಿ ಆಗಿ ಕೆಲಸ ಮಾಡುತ್ತಿದ್ದ ಮಹಿಳೆಯ ಮೇಲೆ, ಅದೇ ಆಸ್ಪತ್ರೆಯ  ಮಾಲೀಕನ ಸೋದರಳಿಯ ಮತ್ತು  ಆತನ ಸ್ನೇಹಿತ ಸೇರಿ ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆ ಪಾಟ್ಣಾದ ಜಕ್ಕನ್ಪುರದಲ್ಲಿ ನಡೆದಿದೆ. ಆರೋಪಿಗಳಿಬ್ಬರು ಈಗ ಪೊಲೀಸರ ವಶದಲ್ಲಿದ್ದಾರೆ.
 
ಆತನ ಜತೆ ಬಂದಿದ್ದ ಸ್ನೇಹಿತ ಮುಖೇಶ್ ಯಾದವ್ ಆರೋಗ್ಯ ಕೆಟ್ಟಿದೆ ಎಂದು ಸುಳ್ಳು ನೆಪ ಹೇಳಿ ಆಸ್ಪತ್ರೆಯಲ್ಲಿ ದಾಖಲಾದ. ಆ ಸಮಯದಲ್ಲಿ ಕರ್ತವ್ಯದಲ್ಲಿದ್ದ 30 ವರ್ಷದ ಸಹಾಯಕಿಯನ್ನು ಅವರಿಬ್ಬರು ಒತ್ತಾಯಪೂರ್ವಕವಾಗಿ ಆಪರೇಶನ್ ಥಿಯೇಟರ್‌ಗೆ ಎಳೆದೊಯ್ದರು.  ಆದರೆ ಅಲ್ಲಿ ಸಿಸಿಟಿವಿ ಅಳವಡಿಸಿದ್ದ ಕಾರಣಕ್ಕೆ ಅಲ್ಲಿದ್ದ ಹೊರಬಿದ್ದ ಅವರು ಇನ್ನೊಂದು ಕೋಣೆಗೆ ಕರೆದೊಯ್ದು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದರು. 
 
ಆಸ್ಪತ್ರೆಯಲ್ಲಿದ್ದ ಯಾವೊಬ್ಬ ಸಿಬ್ಬಂದಿಯೂ ಆಕೆಯ ಸಹಾಯಕ್ಕೆ ಬರಲಿಲ್ಲ ಮತ್ತು ಪೊಲೀಸರಿಗೆ ಮಾಹಿತಿ ನೀಡುವ ಔಚಿತ್ಯವು ಕೂಡ ಯಾರಲ್ಲಿಯೂ ಕಂಡುಬರಲಿಲ್ಲ. ಆ ಸಮಯದಲ್ಲಿ ಪೀಡಿತಳನ್ನು ಹೊರತು ಪಡಿಸಿ ಬೇರೆ ಮಹಿಳಾ ಉದ್ಯೋಗಿಗಳು ಕರ್ತವ್ಯದಲ್ಲಿರಲಿಲ್ಲ. ಜಕ್ಕಲ್ಪುರದ ವಿಗ್ರಹಪುರ ನಿವಾಸಿಯಾಗಿರುವ ಆರೋಪಿ  ಅವರ ಮಾವ ಆ ಆಸ್ಪತ್ರೆಯ ಮಾಲೀಕರಾಗಿದ್ದಾರೆ. 
 
ನಂತರ ಪೀಡಿತಳನ್ನು ವಾಹನದಲ್ಲಿ ಅಲ್ಲಿಂದ ಕರೆದುಕೊಂಡು ಹೋದ ಆರೋಪಿಗಳು, ರಾಮಲಖನ್ ರಸ್ತೆಯಲ್ಲಿ ಆಕೆಯನ್ನು ಬಿಟ್ಟು ಅಲ್ಲಿಂದ ಪರಾರಿಯಾದರು. 
 
ಘಟನೆಗೆ ಸಂಬಂಧಿಸಿದಂತೆ ಆಸ್ಪತ್ರೆಯಿಂದ ಅಧಿಕೃತ ದೂರು ದಾಖಲಾಗಿಲ್ಲ. ಮಾರನೇ ದಿನ ಗುರುತು ಹೇಳಿಕೊಳ್ಳಲು ಬಯಸದ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಘಟನೆಯ ಕುರಿತು ಪೋಲಿಸರಿಗೆ ಮಾಹಿತಿ ನೀಡಿದರು ಎಂದು ತಿಳಿದು ಬಂದಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಕ್ಷುಲ್ಲಕ ಕಾರಣಕ್ಕೆ ಪತ್ನಿಗೆ ಡಿವೋರ್ಸ್ ನೀಡಿದ ಪತಿ: ಕಾರಣ ಕೇಳಿದ್ರೆ ಶಾಕ್ ಆಗ್ತೀರಾ