Select Your Language

Notifications

webdunia
webdunia
webdunia
webdunia

ಕ್ಷುಲ್ಲಕ ಕಾರಣಕ್ಕೆ ಪತ್ನಿಗೆ ಡಿವೋರ್ಸ್ ನೀಡಿದ ಪತಿ: ಕಾರಣ ಕೇಳಿದ್ರೆ ಶಾಕ್ ಆಗ್ತೀರಾ

dubai , ಶುಕ್ರವಾರ, 24 ನವೆಂಬರ್ 2023 (08:45 IST)
ಗೆಳೆಯ ಗೆಳೆತಿಯರು ಮತ್ತು ತನ್ನ ಕುಟುಂಬದ ಸದಸ್ಯರೊಂದಿಗೆ ನಿರಂತರವಾಗಿ ಫೋನ್ ಕರೆಯಲ್ಲಿ ಬಿಜಿಯಾಗಿರುತ್ತಿದ್ದ ಪತ್ನಿಯಿಂದ ಪತಿ ರೋಸಿ ಹೋಗಿದ್ದನು. ಇದೇ ಕೋಪದ ಭರದಲ್ಲಿ ಪತಿ ತನ್ನ ಪತ್ನಿಗೆ ವಿಚ್ಚೇದನ ನೀಡಿದ್ದಾನೆ ಎಂದು ಮೂಲಗಳು ತಿಳಿಸಿವೆ. 
 
ವಾಟ್ಸ್‌ಪ್ ಸಂದೇಶಗಳನ್ನು ಓದದೆ ನಿರ್ಲಕ್ಷ್ಯ ವಹಿಸಿದ ಪತ್ನಿಗೆ ಸೌದಿ ಅರೇಬಿಯಾದ ಪತಿ ಮಹಾಶಯನೊಬ್ಬ ವಿಚ್ಚೇದನ ನೀಡಿದ ವಿಚಿತ್ರ ಘಟನೆ ವರದಿಯಾಗಿದೆ. 
 
ಮಕ್ಕಳ ಆರೈಕೆಯನ್ನು ಮಾಡದೆ ಕುಟುಂಬವನ್ನು ನಿರ್ಲಕ್ಷಿಸಿ ಕೇವಲ ಫೋನ್ ಕರೆಗಳಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಳು. ಯಾಕೆ ನನ್ನ ವಾಟ್ಸ್‌ಪ್ ಸಂದೇಶಗಳಿಗೆ ಉತ್ತರಿಸುವುದಿಲ್ಲ ಎಂದು ಪತಿ ಕೇಳಿದಾಗ, ನಾನು ಗೆಳತಿಯೊಂದಿಗೆ ಫೋನ್‌ನಲ್ಲಿ ಬಿಜಿಯಾಗಿದ್ದೆ ಎನ್ನುವ ಉತ್ತರ ನೀಡುತ್ತಿದ್ದಳು ಎನ್ನಲಾಗಿದೆ.  
 
ಪತ್ನಿ ಕುಟುಂಬವನ್ನು ಮಕ್ಕಳನ್ನು ನಿರ್ಲಕ್ಷಿಸಿ ಕೇವಲ ತನ್ನ ಸ್ಮಾರ್ಟ್‌ಫೋನ್‌ನೊಂದಿಗೆ ಗೆಳತಿಯರು ಕುಟುಂಬದ ಇತರ ಸದಸ್ಯರೊಂದಿಗೆ ಕರೆಯಲ್ಲಿ ನಿರತಳಾಗಿರುತ್ತಿದ್ದಳು. ಆಕೆಗೆ ಗೊತ್ತಿದ್ದರೂ ನನ್ನ ಸಂದೇಶಗಳಿಗೆ ಉತ್ತರಿಸುತ್ತಿರಲಿಲ್ಲ. ಹಲವಾರು ಬಾರಿ ಆಕೆಯನ್ನು ಸರಿ ದಾರಿಗೆ ತರುವ ಪ್ರಯತ್ನ ಮಾಡಿದರೂ ವಿಫಲವಾದ ಹಿನ್ನೆಲೆಯಲ್ಲಿ ಆಕೆಗೆ ವಿಚ್ಚೇದನ ನೀಡಿದ್ದೇನೆ ಎಂದು ಪತಿ ಮಾಧ್ಯಮಗಳಿಗೆ ತಿಳಿಸಿದ್ದಾನೆ. 
 
ಇತ್ತೀಚಿನ ಸಮೀಕ್ಷೆಗಳ ಪ್ರಕಾರ ಸಾಮಾಜಿಕ ಅಂತರ್ಜಾಲ ತಾಣಗಳಿಂದಾಗಿ ವಿಚ್ಚೇದನ ಪ್ರಕರಣಗಳಲ್ಲಿ ಹೆಚ್ಚಳವಾಗುತ್ತಿವೆ. ಫೇಸ್‌ಬುಕ್‌ನಿಂದ ಶೇ.3 ರಷ್ಟು ವಿಚ್ಚೇದನ ಪ್ರಕರಣಗಳಲ್ಲಿ ಏರಿಕೆಯಾಗಿವೆ ಎಂದು ಇಂಗ್ಲೆಂಡ್‌ ಸಮೀಕ್ಷಾ ಸಂಸ್ಥೆಯೊಂದು ವರದಿಯಲ್ಲಿ ಬಹಿರಂಗಪಡಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೈಟೆಕ್ ವೈಶ್ಯಾವಾಟಿಕೆ: ಇಬ್ಬರು ಹಾಟ್ ನಟಿಯರು ಅರೆಸ್ಟ್