Publish Date: Mon, 26 Apr 2021 (07:07 IST)
Updated Date: Mon, 26 Apr 2021 (07:08 IST)
ಪಾಟ್ನಾ : ಸ್ನೇಹಿತನೊಂದಿಗೆ ತಿರುಗಾಡಲು ಹೋದ 9 ವರ್ಷದ ಮಗನನ್ನು ವ್ಯಕ್ತಿಯೊಬ್ಬ ಕೊಲೆ ಮಾಡಿದ ಘಟನೆ ಮಲಹಿಪಕ್ಡಿಯ ಕೊಳೆಗೇರಿ ಪ್ರದೇಶದಲ್ಲಿ ನಡೆದಿದೆ.
ಮಗ ತನ್ನ ಸ್ನೇಹಿತರ ಜೊತೆ ತಿರುಗಾಡಲು ಹೊರಗಡೆ ಹೋಗಿದ್ದಾನೆ. ಇದರಿಂದ ಕೋಪಗೊಂಡಿದ್ದ ತಂದೆ ಮಗ ಮನೆಗೆ ಬರುತ್ತಲೆ ಆತನ ಕೈಕಾಲು ಕಟ್ಟಿ ಆತನನ್ನು ಹಲವು ಗಂಟೆಗಳ ಕಾಲ ಥಳಿಸಿದ್ದಾನೆ. ಇದರಿಂದ ಬಾಲಕನಿಗೆ ತೀವ್ರ ಗಾಯಗಳಾಗಿ ಜೀವ ಬಿಟ್ಟಿದ್ದಾನೆ.
ಈ ಬಗ್ಗೆ ಆರೋಪಿಯ ಪತ್ನಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.