Select Your Language

Notifications

webdunia
webdunia
webdunia
webdunia

ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿ ಮಗಳನ್ನೇ ಕೊಂದ ಪಾಪಿ ತಂದೆ

ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿ ಮಗಳನ್ನೇ ಕೊಂದ ಪಾಪಿ ತಂದೆ
ಕೊಚ್ಚಿ , ಬುಧವಾರ, 21 ಏಪ್ರಿಲ್ 2021 (07:18 IST)
ಕೊಚ್ಚಿ : ಆರ್ಥಿಕ ಬಿಕ್ಕಟ್ಟಿನಿಂದಾಗಿ ತನ್ನ 11 ವರ್ಷದ ಮಗಳನ್ನು ಕೊಲೆ ಮಾಡಿದ ಆರೋಪದ ಮೇಲೆ ಎರ್ನಾಕುಲಂ ನಗರ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.

ಆರೋಪಿ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದ. ಈ ಹಿನ್ನಲೆಯಲ್ಲಿ ತನ್ನ ಮಗಳನ ಜೊತೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ. ಹಾಗಾಗಿ ಮಗಳನ್ನು ಸಂಬಂಧಿಕರನ್ನು ಭೇಟಿಯಾಗುವ ನೆಪದಲ್ಲಿ ಮನೆಯಿಂದ ಕರೆದೊಯ್ದು  ಮಗಳ ಜತೆ ನದಿಗೆ ಹಾರಿದ್ದಾನೆ.

ಈ ಘಟನೆಯಲ್ಲಿ ಬಾಲಕಿ ಸಾವನಪ್ಪಿದ್ದಾಳೆ. ಆದರೆ ಆತ ಅಲ್ಲಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಈ ವಿಚಾರ ಪೊಲೀಸ್ ತನಿಖೆಯಿಂದ ಬಯಲಾದ ಹಿನ್ನಲೆಯಲ್ಲಿ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾ ನಿವಾರಣೆಗೆ ಸಲಹೆ ಕೊಟ್ಟ ಮಾಜಿ ಪಿಎಂ ಮನಮೋಹನ್ ಸಿಂಗ್ ಗೂ ಸೋಂಕು