Select Your Language

Notifications

webdunia
webdunia
webdunia
webdunia

ಮೂತ್ರ ಕುಡಿದು ಮಾನಸಿಕ ಸಮಸ್ಯೆಯಿಂದ ಮುಕ್ತನಾಗಿದ್ದಾನಂತೆ!

ಮೂತ್ರ ಕುಡಿದು ಮಾನಸಿಕ ಸಮಸ್ಯೆಯಿಂದ ಮುಕ್ತನಾಗಿದ್ದಾನಂತೆ!
ಲಂಡನ್ , ಸೋಮವಾರ, 2 ಮೇ 2022 (08:30 IST)
ಲಂಡನ್ : ಆರೋಗ್ಯ ಕಾಳಜಿಗಾಗಿ ಜನ ದಿನಕ್ಕೊಂದು ವಿಧಾನ ಅನುಸರಿಸುತ್ತಾರೆ.
 
ಕೆಲವರಂತೂ ತಮ್ಮ ಸೌಂದರ್ಯ ಹೆಚ್ಚುತ್ತದೆ ಅಂದ್ರೆ ಸಾಕು ಯಾರು ಸಲಹೆ ನೀಡಿದರೂ ಬೇಡ ಅನ್ನೋದೇ ಇಲ್ಲ. ಆದರೆ ಇಲ್ಲೊಬ್ಬ ಭೂಪ ವಿಲಕ್ಷಣ ವಿಧಾನವನ್ನು ಅನುಸರಿಸಿದ್ದಾನೆ. ಅವನ ಈ ನಡೆಯನ್ನು ಕಂಡು ನೆಟ್ಟಿಗರೇ ದಂಗಾಗಿದ್ದಾರೆ.

ಹೌದು. ಇಂಗ್ಲೆಂಡ್ನಲ್ಲಿರುವ 34 ವರ್ಷದ ವ್ಯಕ್ತಿಯೊಬ್ಬ ತನ್ನ ಮಾನಸಿಕ ಸಮಸ್ಯೆಗಳಿಂದ ಹೊರಬರಲು ಪ್ರತಿದಿನ ಮೂತ್ರ ಸೇವನೆ ಮಾಡುವ ಅಭ್ಯಾಸ ರೂಢಿಸಿಕೊಂಡಿದ್ದಾನೆ. ಇದರಿಂದಾಗಿ ತಾನು ಮಾನಸಿಕ ಸಮಸ್ಯೆಯಿಂದ ಹೊರಬಂದಿರುವುದು ಮಾತ್ರವಲ್ಲದೇ ಎಂದಿಗಿಂತ 10 ವರ್ಷ ಚಿಕ್ಕವನಾಗಿ ಯೌವ್ವನದ ಯುವಕನ ಹಾಗೆ ಕಾಣುವಂತೆ ಮಾಡಿದೆ ಎನ್ನಲಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. 

ವರದಿಗಳ ಪ್ರಕಾರ, ಹ್ಯಾಂಪ್ಶೈರ್ನ ಹ್ಯಾರಿ ಮೆಟಾಡೀನ್ ಎಂಬ ವ್ಯಕ್ತಿಯೊಬ್ಬರು 2016ರಿಂದ ತನ್ನ ಮೂತ್ರವನ್ನು ತಾನೇ ಸೇವಿಸಲು ಪ್ರಾರಂಭಿಸಿದ್ದಾನೆ. ಈತನಿಗೆ ಮಾನಸಿಕ ಸಮಸ್ಯೆಗಳಿದ್ದು, ಇದರಿಂದ ಹೊರಬರಲಾಗದೇ ಹತಾಶೆಗೆ ಒಳಗಾಗಿದ್ದಾನೆ.

ಅವನು ಮೂತ್ರ ಚಿಕಿತ್ಸೆ ಪ್ರಾರಂಭಿಸಿದ ನಂತರ ಮನಸ್ಸಿಗೆ ಶಾಂತಿ ಸಿಕ್ಕಂತಾಗಿದೆ. ಅಲ್ಲದೆ ಶಾಂತ ರೀತಿಯ ನಿರ್ಣಯಗಳನ್ನೂ ತೆಗೆದುಕೊಳ್ಳುವಂತೆ ಮಾಡಿದೆ. ಹಾಗಾಗಿ ಪ್ರತಿದಿನ ಇದೇ ವಿಧಾನವನ್ನು ಮುಂದುವರಿಸಿದ್ದಾರೆ.

ವರದಿಗಳ ಪ್ರಕಾರ ಮೆಟಾಡೀನ್, ಪ್ರತಿದಿನ 200 ಮಿಲಿಯಷ್ಟು ತನ್ನದೇ ಮೂತ್ರವನ್ನು ಕುಡಿಯುತ್ತಾನೆ. ತಾಜಾ ಮೂತ್ರದೊಂದಿಗೆ ತಿಂಗಳ ಹಳೆಯ ಮೂತ್ರವನ್ನೂ ಮಿಶ್ರಣ ಮಾಡಿ ಕುಡಿಯುವ ಈತ ತನ್ನ ಮೂತ್ರವನ್ನು ಸೂಪರ್ ಕ್ಲೀನ್ ಮೂತ್ರವೆಂದು ಘೋಷಿಸಿಕೊಂಡಿದ್ದಾನೆ. ಅಲ್ಲದೆ ಹೆಚ್ಚುಕಾಲ ಸಂಗ್ರಹಿಸಿದ ಮೂತ್ರವು ದುರ್ವಾಸನೆಯಿಂದ ಕೂಡಿರುತ್ತದೆ. ಆದರೆ ಅದು ಹೆಚ್ಚು ರುಚಿಯಾಗಿರುತ್ತದೆ. ಇದನ್ನು ಆತ ಸಂತೋಷದಿಂದಲೇ ಸ್ವೀಕರಿಸುತ್ತಾನೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ದಾಖಲೆಯ 1.68 ಕೋಟಿ ರೂ. ಜಿಎಸ್‍ಟಿ ತೆರಿಗೆ ಸಂಗ್ರಹ!