Select Your Language

Notifications

webdunia
webdunia
webdunia
webdunia

ಕಿಡ್ನಿ ಫೈಲ್ ಆಗುವುದಕ್ಕಿಂತ ಮುನ್ನ ಕಾಣಿಸುತ್ತವೆ ಈ ಲಕ್ಷಣಗಳು

ಕಿಡ್ನಿ ಫೈಲ್ ಆಗುವುದಕ್ಕಿಂತ ಮುನ್ನ ಕಾಣಿಸುತ್ತವೆ ಈ ಲಕ್ಷಣಗಳು
ಬೆಂಗಳೂರು , ಮಂಗಳವಾರ, 19 ಅಕ್ಟೋಬರ್ 2021 (07:02 IST)
ಮೂತ್ರಪಿಂಡವು ದಿನವಿಡೀ ರಕ್ತವನ್ನು ಸ್ವಚ್ಛಗೊಳಿಸುವ ಮತ್ತು ದೇಹದಿಂದ ಹಾನಿಕಾರಕ ವಸ್ತುಗಳನ್ನು ತೆಗೆದುಹಾಕುವ ಕೆಲಸ ಮಾಡುತ್ತದೆ. ಇದಲ್ಲದೇ, ಇದು ದೇಹದಲ್ಲಿನ ಇಲೆಕ್ಟ್ರೋಲೈಟ್ಸ್ ಸಮತೋಲನವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ.

ಆದರೆ ನಮ್ಮ ಕೆಲವು ಅಭ್ಯಾಸಗಳು ಮೂತ್ರಪಿಂಡದ ಸಮಸ್ಯೆಗೆ ಕಾರಣವಾಗಿಬಿಡಬಹುದು. ಮೂತ್ರಪಿಂಡದ ವೈಫಲ್ಯದ ಅಪಾಯವನ್ನು ಕೂಡಾ ತಂದೊಡ್ಡಬಹುದು. ಅತಿದೊಡ್ಡ ಸಮಸ್ಯೆ ಎಂದರೆ ಮೂತ್ರಪಿಂಡದ ರೋಗಗಳ ಲಕ್ಷಣಗಳು ಸಾಕಷ್ಟು ಹಾನಿ ಮತ್ತು ವಿಳಂಬದ ನಂತರ ತಿಳಿದುಬರುತ್ತದೆ.
ಮೂತ್ರಪಿಂಡದ ಸಮಸ್ಯೆಗೆ ಕಾರಣವಾಗುವ ಅಭ್ಯಾಸಗಳು :
ನಿಮಗೂ ಈ ಕೆಳಗಿನ ಅಭ್ಯಾಸಗಳಿದ್ದರೆ ಅದನ್ನು ತಕ್ಷಣ ಬದಲಾಯಿಸಿಕೊಳ್ಳಿ. ಇಲ್ಲವಾದರೆ ಅದು ಮೂತ್ರ ಪಿಂಡ ಅಥವ ಕಿಡ್ನಿ ವೈಫಲ್ಯಕ್ಕೆ ಕಾರಣವಾಗಬಹುದು.
1. ನೀವು ಅತಿಯಾದ ಉಪ್ಪನ್ನು ಸೇವಿಸುತ್ತಿದ್ದರೆ, ರಕ್ತದೊತ್ತಡ ಅಧಿಕವಾಗಬಹುದು. ಇದು ಮೂತ್ರಪಿಂಡಗಳ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟುಮಾಡುತ್ತದೆ.
2. ನೀವು NSAIDಗಳಂತಹ ನೋವು ನಿವಾರಕಗಳನ್ನು ತೆಗೆದುಕೊಳ್ಳುತ್ತಿದ್ದರೆ ಜಾಗರೂಕರಾಗಿರಬೇಕು. ಏಕೆಂದರೆ, ಇದು ಮೂತ್ರಪಿಂಡದ ರೋಗಗಳ ಲಕ್ಷಣಗಳನ್ನು ಇನ್ನಷ್ಟು ಹದಗೆಡಿಸುತ್ತದೆ.
3. ಸಾಕಷ್ಟು ನೀರು ಕುಡಿಯುವುದರಿಂದ, ಮೂತ್ರಪಿಂಡವು ಸೋಡಿಯಂ ಮತ್ತು ಜೀವಾಣುಗಳನ್ನು ಸುಲಭವಾಗಿ ಹೊರಹಾಕುತ್ತದೆ. ನೀವು ನೀರು ಕುಡಿಯದಿದ್ದರೆ, ಮೂತ್ರಪಿಂಡಗಳು ಸೋಡಿಯಂ ಮತ್ತು ಜೀವಾಣುಗಳನ್ನು ಹೊರಹಾಕಲು ಹೆಚ್ಚು ಕೆಲಸ ಮಾಡಬೇಕಾಗುತ್ತದೆ.
4. ಧೂಮಪಾನ ಮತ್ತು ಮದ್ಯಪಾನ ಮಾಡುವ ಅಭ್ಯಾಸವು ಮೂತ್ರಪಿಂಡಗಳಿಗೆ ಅಪಾಯಕಾರಿ. ಧೂಮಪಾನ ಮತ್ತು ಮದ್ಯಪಾನ ಮಾಡುವ ಜನರಲ್ಲಿ ಮೂತ್ರಪಿಂಡದ ಕಾಯಿಲೆಗಳ ಅಪಾಯವು ದ್ವಿಗುಣಗೊಳ್ಳುತ್ತದೆ ಎಂದು ಸಂಶೋಧನೆಯಲ್ಲಿ ಕಂಡುಬಂದಿದೆ.
5. ಹೆಚ್ಚು ಸಕ್ಕರೆ ತಿನ್ನುವ ಅಭ್ಯಾಸವನ್ನು ಹೊಂದಿದ್ದರೆ, ಅದು ಬೊಜ್ಜು, ಅಧಿಕ ರಕ್ತದೊತ್ತಡ ಮತ್ತು ಮಧುಮೇಹಕ್ಕೆ ಕಾರಣವಾಗಬಹುದು. ಮೂತ್ರಪಿಂಡ ವೈಫಲ್ಯಕ್ಕೆ ಈ ಮೂರು ರೋಗಗಳು ಮುಖ್ಯ ಕಾರಣ.


Share this Story:

Follow Webdunia kannada

ಮುಂದಿನ ಸುದ್ದಿ

ಪ್ರತಿದಿನ ಈ ಸಮಯದಲ್ಲಿ 1 ದಾಳಿಂಬೆ ಹಣ್ಣು ಸೇವಿಸಿ